ನಿನ್ನ ನಂಬಿದವರ ಕಾಯೊ ನಿಜವುಳ್ಳ ದೇವ
ಎನ್ನನು ಉದ್ಧರಿಸಿ ಕಾಯೊ ಕರುಣಿವೆಂಕಟ ಪ.
ಸುರಪತಿಯು ಮುನಿದು ಮಳೆಗರೆಯಲೇಳು ದಿನವೂ ಬಿಡದೆ
ತುರುಗಳೆಲ್ಲ ಸೊರಗಿ ಬಾಯ ಬಿಡುತಿರಲು
ಬೆರಳಿನಿಂದ ಗೋವರ್ಧನ ಗಿರಿಯನ್ನೆತ್ತಿ ಗೋವ್ಗಳನು
ದ್ಧರಿಸಿ ಕಾಯ್ದೆ ಕರುಣಾಸಿಂಧು ಕಮಲಲೋಚನ 1
ಮಡುವಿನೊಳಗೆ ಮಲೆತನೀರ ಕುಡಿಯ ಬಂದಾಗಜವ ನೆಗಳು
ಪಿಡಿದು ಕಾಲಕಚ್ಚಿ ಭಂಗಬಡಿಸುತ್ತಿರಲು
ತಡೆಯಲಾರದೆ ಪ್ರಾಣ ಬಿಡುವ ಸಮಯದಲ್ಲಿ ಬಂದು
ಕೆಡಹಿ ಚಕ್ರದಿಂದ ನೆಗಳ ಕರಿಯ ಸಲಹಿದೆ2
ಮತ್ತೆ ಮಂದ e್ಞÁನದಿಂದ ಮೈ ಮರೆದು ಬರಲು ಸ್ತನವ
ತುತ್ತು ಮಾಡಿ ಪಿಡಿದು ಕುದುರೆ ಕ್ರೂರ ದಂತದಿ
ಕತ್ತರಿಸುವ ಸಮಯದಲ್ಲಿ ಕಡೆಮಾಡಿ ಕಾಯೆನ್ನ
ಕರ್ತು ಹೆಳವನಕಟ್ಟೆ ಕರುಣಿ ವೆಂಕಟ 3
****