..
kruti by ಬೇಲೂರು ವೈಕುಂಠ ದಾಸರು belur vaikunta dasaru
ದೇವನ ನೆರೆನಂಬಿರೊ
ಶ್ರೀವರ ವೇಲಾಪುರಿಯ ಚೆನ್ನಿಗನ ಪ
ಕರೆಯರಿಗೊರಳಭವನ ಕೃಪೆಯಿಂದ ದಶಗ್ರೀವ
ನೆರೆಭಾಗ್ಯಪಡೆದು ಗರ್ವದೊಳಿರಲು
ಅರೆಯಟ್ಟಿ ಶಿರಗಳ ಕುಟ್ಟಿಹಾಕಿ ತನ್ನ
ಮೊರೆಹೊಕ್ಕ ವಿಭೀಷಣಗೆ ಪಟ್ಟಗಟ್ಟಿದ 1
ಭಾಗೀರಥಿಯ ತಾಳ್ದ ಮಹೇಶನ ತಲೆ
ವಾಗಿಲ ಕಾಯಿಸಿಕೊಂಡಿಹ ಬಾಣನ
ತಾಗಿ ತೋಳಕಡಿದ ಸುರನ ಕುಮಾರತಿಗೆ
ಭೋಗಿಸುವಂತೆ ತಮ್ಮಗೆ ಕೈವರ್ತಿಸಿ ಕೊಟ್ಟ2
ಲೋಕದೊಳಜಭವಾದಿಗಳಿಂದ ಉಬ್ಬಿದ ಅ-
ನೇಕ ರಕ್ಕಸರನೊಟ್ಟಿಗೆ ತಾಹೆನು-
ತಾ ಕೊಟ್ಟ ವರವನೆ ಶಿರಮುಟ್ಟಿ ಕೊಂಡಾ ಕರು
ಣಾಕರ ವರ ವೇಲಾಪುರಿಯ ಚೆನ್ನಿಗನ 3
***