Showing posts with label ದುರ್ಗೆ ಪಾಲಿಸೆ ಮಾತೆ ನಂಬಿದೆ ಬ್ರಹ್ಮ gurugopala vittala DURGE PAALISE MAATE NAMBIDE BRAHMA. Show all posts
Showing posts with label ದುರ್ಗೆ ಪಾಲಿಸೆ ಮಾತೆ ನಂಬಿದೆ ಬ್ರಹ್ಮ gurugopala vittala DURGE PAALISE MAATE NAMBIDE BRAHMA. Show all posts

Friday, 27 December 2019

ದುರ್ಗೆ ಪಾಲಿಸೆ ಮಾತೆ ನಂಬಿದೆ ಬ್ರಹ್ಮ gurugopala vittala DURGE PAALISE MAATE NAMBIDE BRAHMA




 ರಾಗ ಕಲ್ಯಾಣಿ    ಆದಿತಾಳ 

2nd Audio by Vidwan Sumukh Moudgalya

ಶ್ರೀ ಗುರುಗೋಪಾಲವಿಠ್ಠಲ ದಾಸರ ಕೃತಿ 


ದುರ್ಗೆ ಪಾಲಿಸೆ ಮಾತೆ । ನಂಬಿದೆ ಬ್ರಹ್ಮ 
ಭರ್ಗಾದಿ ಸುರವಿನುತೆ ॥ ಪ ॥
ದುರ್ಗಮ ಭವದಿಂದ ನಿರ್ಗಮಗೈಸು , ಹೇ -
ಭಾರ್ಗವಿ ಸ್ವರ್ಗ ಅಪವರ್ಗ ಪ್ರದಾತೆ ॥ ಅ ಪ ॥

ಅಂಬರ ಭೂಮಿ ವಿಹಾರಿ । ಅಷ್ಟಾಯುಧ ದಿ -
ವ್ಯಾಂಬರಧಾರಿ ಅಸುರಾರಿ ।
ನಂಬಿದೆ ನಿನ್ನ ಪಾದಾಂಬುಜ ಎನ್ನ ಹೃ -
ದಂಬರದಲ್ಲಿಹ ಬಿಂಬನ ತೋರಿಸು ॥
ಅಂಬೆ ಸುನಿತಂಬೆ ಜಗದಂಬೆ ಶುಭಗುಣ ನಿಕುರಂಭೆ ॥1॥

ನಂದಗೋಪನ ಕುಮಾರಿ । ನರಸಿಂಹಾಂಕ -
ಮಂದಿರೆ ಸಜ್ಜನೋದ್ಧಾರಿ ।
ಇಂದಿರೆ ಎನ್ನಯ ಇಂದ್ರಿಯ ಮನಸು ಮು -
ಕುಂದನ ಪಾದದಲ್ಲಿ ತಂದು ನಿಲ್ಲಿಸು ॥
ಎಂದೆ ಎನಗಿಂದೆ ಇನ್ನುಮುಂದೆ ಗತಿನೀನೇ ಎಂದೆ ॥ 2 ॥

ಸಿರಿನಾರಸಿಂಹನ ರಾಣಿ ವರನೀಲವೇಣಿ
ಪರಮಕಲ್ಯಾಣಿ ಗುಣಶ್ರೇಣಿ ।
ಪರತರ ಗುರುಗೋಪಾಲವಿಠ್ಠಲನ 
ಚರಣಕಮಲದಲ್ಲಿ ಸ್ಥಿರವಾದ ಭಕುತಿಯ ॥
ನೀಡೆ ಎನಗೀಡೆ ನಲಿದಾಡೆ ದಯಮಾಡಿ ನೋಡೆ ॥ 3 ॥
***

just scroll down for other devaranama