Showing posts with label ವಿನಯಾದಿಂದಲಿ ನಮಿಸುವೆನಾ ವೃಂದಾ ವನದಿ ರಾಜಿಪ ರಾಘವೇಂದ್ರ ಗುರವಿನ varadesha vittala. Show all posts
Showing posts with label ವಿನಯಾದಿಂದಲಿ ನಮಿಸುವೆನಾ ವೃಂದಾ ವನದಿ ರಾಜಿಪ ರಾಘವೇಂದ್ರ ಗುರವಿನ varadesha vittala. Show all posts

Sunday, 1 August 2021

ವಿನಯಾದಿಂದಲಿ ನಮಿಸುವೆನಾ ವೃಂದಾ ವನದಿ ರಾಜಿಪ ರಾಘವೇಂದ್ರ ಗುರವಿನ ankita varadesha vittala

 ..

kruti by ವರದೇಶ ವಿಠಲರು varadesha vittala dasaru

ರಾಘವೇಂದ್ರರ ಸ್ತೋತ್ರ


ವಿನಯಾದಿಂದಲಿ ನಮಿಸುವೆನಾ ವೃಂದಾ

ವನದಿ ರಾಜಿಪ ರಾಘವೇಂದ್ರ ಗುರವಿನ ಪ


ದುರಿತವಾರಣ ಪಂಚಾನನನ ನರ -

ಹರಿರೂಪಸ್ತಂಭದಿ ಪ್ರಕಟಗೈಸಿದನ

ಹರಿಭಕ್ತಾಗ್ರಣಿಯೆಂದೆನಿಪನ ನಾರ -

ದರ ಉಪದೇಶಗರ್ಭದಿ ಕೈಕೊಂಡಿಹನ 1


ಸಿರಿವ್ಯಾಸತೀರ್ಥರೆನಿಪನ ಪುರಂ -

ದರ ದಾಸಾರ್ಯರಿಗು ಪದೇಶ ಗೈದವÀನ

ವರಚಂದ್ರಿಕಾ ರಚಿಸಿದನ ದುಷ್ಟ

ಪರಮಾದ್ರಿಗಳಿಗೆ ಕುಲಿಶನೆನಿಪನ 2


ಶ್ರೀ ಸುಧೀಂದ್ರ ಕರಾಬ್ಜಜನ ದಿವ್ಯ

ಭಾಸುರ ಪರಿಮಳ ಗ್ರಂಥ ಕರ್ತರನ -

ಮೀಸಲ ಮನದಿ ಭಜಿಪರನ ದೋಷ -

ನಾಶನ ಗೈಸಿ ಪೋಷಿಸುವ ಶಕ್ತರನ3


ವರಮಂತ್ರ ಸದ್ಮನಿಲಯನ ಶ್ರೀ -

ಗುರು ಮಧ್ವಮತ ದುರಂಧರದೆನಿಸುವನ

ಹರಿಪ್ರೀತಿ ಪೂರ್ಣಪಾತ್ರರನ

ಈ ಧರಿಯೊಳು ಬಹುಪರಿ ಮೆರೆವ ಮುನಿಪನ 4


ತುಂಗಭದ್ರಾತೀರವಾಸನ ಶುಭ

ಮಂಗಲಚರಿತ ಕಮಂಡಲಧರನ

ರಂಗವರದೇಶ ವಿಠಲನ ಪದ

ಭೃಂಗ ಯತಿಕುಲ ಕಂಜಾರ್ಕ ಸನ್ನಿಭನ 5

***