ಶ್ರೀ ಪುರಂದರದಾಸಾರ್ಯ ವಿರಚಿತ ಗೋರಂಟ್ಲ ಕೃಷ್ಣದೇವರ ಸ್ತೋತ್ರ ಸುಳಾದಿ
ರಾಗ : ಷಣ್ಮುಖಪ್ರಿಯ
ಧೃವತಾಳ
ಕ್ಷೀರಾಂಬುಧಿಯೊಳಿಹ ಮಹಾವಿಷ್ಣು ನೀನು
ದೇವಕಿ ಜಠರದೊಳಿಹದೇನಾಶ್ಚರ್ಯ
ಅನಂತಾಸನದಲ್ಲಿ ಅನಂತ ನೀನು
ದೇವಕಿ ಜಠರದೊಳಿಹದೇನಾಶ್ಚರ್ಯ
ವಿಶ್ವವ್ಯಾಪಕ ನೀನು ವಿಷ್ಣು ನೀನು
ಅಪ್ರಾಕೃತಾಮೇಯ ನಿರ್ವೀರ್ಯ ನೀನು
ಭಕ್ತರ ಪರಾಧೀನ ನೀನಾದಿಯಲ್ಲೋ
ಗೋರಂಟ್ಲ ಚೆನ್ನಾರಾಯ ಪುರಂದರವಿಠ್ಠಲ ॥೧॥
ಮಟ್ಟತಾಳ
ಅರಸಿ ಇದು ಅರಮನೆಯಂತೆ ನೋಡಾ
ಹರಿ ನೀ ದೇವಕಿ ಜಠರದೊಳ್ ಹೀಗೆಂದು ಜ-
ಠರ ವೈಕುಠ ನೋಡಾ
ಗೋರಂಟ್ಲ ಚನ್ನರಾಯ ಪುರಂದರವಿಠ್ಠಲ ॥೨॥
ತ್ರಿವಿಡಿತಾಳ
ವಾಸುದೇವ ಗರ್ಭವಾಸವ ಮಾಡಿದ ನೋಡಾ
ಹಾಸು ಮಂಚ ಶೇಷ ಶ್ರೀಸತಿ ತೊಡೆಯಲ್ಲಿ
ಈಶನಿಗೆ ಗುರುವಾದ ನೀತಾ
ವಾಸವಾದಿಗಳು ಆಳುಗಳಯ್ಯಾ
ಲೇಸು ಧನವೋ ಗೋರಂಟ್ಲ ಚನ್ನರಾಯ
ಪುರಂದರವಿಠ್ಠಲ ॥೩॥
ಅಟ್ಟತಾಳ
ಬೊಮ್ಮಾದಿ ದೇವರುಗಳು ಬೊಮ್ಮಾಂಡದಲ್ಲೆ
ಚರಾಚರರು ಚಾರಿವರಿವುತ್ತಲಿರಲು
ಬೊಮ್ಮಾಂಡ ಒಂದೆ ಬೊಮ್ಮ ಸ್ವರೂಪ
ಗೋರಂಟ್ಲ ಚನ್ನರಾಯ ಪುರಂದರವಿಠ್ಠಲ ॥೪॥
ಆದಿತಾಳ
ಆನಂದವಾಗೆ ಅರ್ಧಾಂಗಿಯಾಗೆ
ಗೋರಂಟ್ಲ ಚನ್ನರಾಯ *ಪುರಂದರವಿಠ್ಠಲ* ॥೫॥
ಜತೆ
ಗರ್ಭವಾಸ ಗೋರಂಟ್ಲ ಚನ್ನರಾಯ
ಪುರಂದರವಿಠ್ಠಲ ॥೬॥
******