Showing posts with label ಬೀಸಣಿಗೆಯಿಂದಲಿ ಬೀಸೋರು indiresha. Show all posts
Showing posts with label ಬೀಸಣಿಗೆಯಿಂದಲಿ ಬೀಸೋರು indiresha. Show all posts

Monday, 2 August 2021

ಬೀಸಣಿಗೆಯಿಂದಲಿ ಬೀಸೋರು ankita indiresha

ಬೀಸಣಿಗೆಯಿಂದಲಿ ಬೀಸೋರು ಪ


ಬಾಳದ ಬೇರ ಬೀಸಣಿಗೆಯಲಿ ಬೀಸೋಳೀಸಮಯದಿ ನಿಂತು ವಾಸುದೇವನಿಗೆ ಅ.ಪ.


ಅಂಬೆಯು ನಿಂತಿಹಳು ಎದುರು ಚಿನ್ನಗೊಂಬೆಯಂತ್ಹೊಳೆವಳುತುಂಬಾ ಭರಣ ಭೂಷಿತಾಂಬುಜ ಕರದೊಳುಲಂಬಿಸಿ ವ್ಯಜನವ ಸಂಭ್ರಮದಲಿ ಸರಸಿಜಾಕ್ಷ ತಾನು 1

ಮಲಯ ಜಾಲಗ ಮಾರುತಾದೋದ್ಭವಹಲವು ಸಾರವು ಬೀರಿತಾ ನಳಿನಾಕ್ಷಿನೀರಜಕರ ನಿಲಯದೊಳಗೆ ಪೊಕ್ಕುಹಲಧರನುಜ ನಿನ್ನ ಬಲು ಸೇವಿಸುವ ನಿತ್ಯ 2

ತಂದೆಯ ಸೇವೆಗಾಗಿ ವ್ಯಜನದೊಳುಮಂದ ಮಾರುತನಾಗಿ ಇಂದಿರೇಶನ ಸರ್ವಸುಂದರಾಂಗವ ಮುಟ್ಟಿಮುಂದಿನ ಸಾಯುಜ ಇಂದು ಭೋಗಿಸುವನು 3

****