Showing posts with label ಭಯ ನಿಜ ನೋಡೊ ನೋಡದೆ ನೀ ಗುಣದೋಷ ಮಾಡೊ mahipati. Show all posts
Showing posts with label ಭಯ ನಿಜ ನೋಡೊ ನೋಡದೆ ನೀ ಗುಣದೋಷ ಮಾಡೊ mahipati. Show all posts

Wednesday 1 September 2021

ಭಯ ನಿಜ ನೋಡೊ ನೋಡದೆ ನೀ ಗುಣದೋಷ ಮಾಡೊ ankita mahipati

ಕಾಖಂಡಕಿ ಶ್ರೀ ಮಹಿಪತಿರಾಯರು

ಭಯ ನಿಜ ನೋಡೊ ಪ 

ನೋಡದೆ ನೀ ಗುಣದೋಷ ಮಾಡೊ ಸದ್ಗುರು ಉಪದೇಶ ಕಡಿವದು ಭವಭಯಪಾಶ ಕೊಡುವದಾನಂದದ ಹರುಷ 1 

ಉಪಾಯದ ಗುಣವರಿಯ ಸುಪಥದೋರು ಶ್ರೀಹರಿಯೆ ಉಪಕಾರವು ನಾ ಮರೆಯೆ ಕೃಪೆಯುಳ್ಳ ನೀ ಧೊರಿಯೆ 2 

ತರಣೋಪಾಯದ ಸುಖಬೆರಿಯೊ ಮಹಿಪತಿಯ ನೀ ಹೊರಿಯೊ 3

***