Showing posts with label ಮೂರು ರೂಪವ ತೋರೋ ಮಾರ್ಜಿವದೊಡೆಯಾ sirigurutandevarada vittala. Show all posts
Showing posts with label ಮೂರು ರೂಪವ ತೋರೋ ಮಾರ್ಜಿವದೊಡೆಯಾ sirigurutandevarada vittala. Show all posts

Friday, 6 August 2021

ಮೂರು ರೂಪವ ತೋರೋ ಮಾರ್ಜಿವದೊಡೆಯಾ ankita sirigurutandevarada vittala

 ..

Kruti by ಸಿರಿಗುರುತಂದೆವರದವಿಠಲರು sirigurutandevarada vittala 

ಅವತಾರತ್ರಯ


ಮೂರು ರೂಪವ ತೋರೋ ಮಾರ್ಜಿವದೊಡೆಯಾ ಪ.


ಸಾರುವೆನು ಶರಣೆಂದು ಚಾರುತವ ಚರಣಕ್ಕೆ ಅ.ಪ.ಅಂಜನೆಯಲುದ್ಭವಿಸಿ ಸಂಜೀವನವ ತಂದುಕಂಜನಾಭನ ದಯದಿಅಂಜದತಿ ಕೆಂಜಡೆಯ ಪಿತಗಂಜಲಿ ಮುಗಿಯುವೆನು 1


ವಾರಿಧಿಯ ನೆರೆದಾಂಟಿ ನಾರಿಗುಂಗುರವಿತ್ತುಕ್ರೂರ ಕೀಚಕನ ಸಂಹಾರವನೆ ಮಾಡುತಲಿವೀರ ಬದರಿಲಿ ಪೋಗಿ ಸಾರಶಾಸ್ತ್ರವ ತಿಳಿದಧೀರ ಮಧ್ವಾಚಾರ್ಯ ಭೀಮ ಕರುಣವ ತೋರೋ 2


ಎರಡೈದು ಶಿರದವನ ಪುರವನೇ ನೀನುರುಹಿದುರುಳ ದುರ್ಯೋಧನನ ಧುರದಿ ಗೆಲಿದುವರ ಉಡುಪಿ ಕ್ಷೇತ್ರದಲಿಸಿರಿಯ ರಮಣಾ ತಂದೆ ವರದ ವಿಠ್ಠಲರೇಯಾ3

***