ರಾಮಾ ರಾಮಾ ಸೀತಾರಾಮಾ ರಘು ಕುಲೋತ್ತಮಾ ಶ್ರೀರಾಮಾ ಪ
ರಾವಣಾರಿಯಾದ ರಾಮಾ ಮಾಯ ರಕ್ಕಸಗೊಲಿದ ರಾಮಾ
ವಾಯುತನಯಗೊಲಿದ ರಾಮಾ ಕೋದಂಡರಾಮಾ ಶ್ರೀರಾಮಾ 1
ಜನಕನ ಜಾಮಾತ ರಾಮ ಜಾನಕಿ ವಲ್ಲಭ ಶ್ರೀರಾಮಾ
ಕ್ಷೋಣಿಗಭಿಮಾನಿ ರಾಮಾ ಕೌಸಲ್ಯಾರಾಮ ಶ್ರೀರಾಮಾ 2
ಇನಕುಲೋತ್ಪನ್ನ ರಾಮಾ ದಿನಕರ ಸತತೇಜ ರಾಮಾ
ಹನುಮೇಶವಿಠಲ ರಾಮಾ ಪುನೀತರಾಮಾ ಶ್ರೀರಾಮಾ 3
****