ಜಯ ಮಂಗಳೆಂದು ಪಾಡಿರೆ ಶ್ರೀರಂಗನಾಥಗೆ
ಲಕ್ಷ್ಮೀರಂಗನಾಥಗೆ ಮಂಗಳಪುರಿ ಜಾಲ
ಹಳ್ಳಿರಂಗ ನಿಲಯಗೆ ಬ್ಯಾಗೆ ಪ
ಅಂಗನೆಯರು ಶೃಂಗಾರದಿ ಸಂಗೀತಪ್ರಿಯಗೆ
ಮಂಗಳಾಂಗ ದೇವಗೆ ಮಾತಂಗವರದಗೆ ಬ್ಯಾಗೆ 1
ಇಂದಿರವರ ಮಂದರೋದ್ಧರ ನಂದಕುವರಗೆ
ಹಿಂದಕೆ ಮುದಗಲ್ಲು ಪುರದಿ ಬಂದು ನಿಂದಗೆ ಬ್ಯಾಗೆ 2
ದಾರಿಯೊಳು ಉಪ್ಪಾರಜನರ ಸೇರಿಬಂದವಗೆಸಾರಿದವರ ಪೊರೆವ 'ಕಾರ್ಪರ ನಾರಶಿಂಹಗೆ' ಬ್ಯಾಗೆ 3
****