Showing posts with label ಸಾಧನ ದೇಹವಿದುಶ್ರೀ ಪದುಮೇಶ prasannashreenivasa. Show all posts
Showing posts with label ಸಾಧನ ದೇಹವಿದುಶ್ರೀ ಪದುಮೇಶ prasannashreenivasa. Show all posts

Friday, 27 December 2019

ಸಾಧನ ದೇಹವಿದುಶ್ರೀ ಪದುಮೇಶ ankita prasannashreenivasa

 ..

kruti by prasanna shreenivasaru ಪ್ರಸನ್ನ ಶ್ರೀನಿವಾಸದಾಸರು


ಸಾಧನ ದೇಹವಿದು

ಶ್ರೀ ಪದುಮೇಶ ದಯದಿ ಕೊಟ್ಟ ದೇಹವಿದು ಪ


ವಿಹಿತಾವಿಹಿತವು ಈರ್ವಿಧ ಕರ್ಮದಿ

ವಿಹಿತವ ಪಿಡಿದು ಅಕಾಮ್ಯದಿ ಸಮ್ಯಕ್ ಆಚರಿಸಿ

ಅಹಿಪಶಯ್ಯನ ಸನ್ಮಹಿಮೆಗಳರಿತು ವ

ರಾಹನ ದಯದಲಿ ಪರಸುಖ ಪೊಂದಲು 1


ಬೇಸರ ತೊರೆದು ಸುಶಾಸ್ತ್ರವನೋದಿ

ಸಾಸಿರ ನಾಮನ ಭಾಸುರ ಗುಣ ಕ್ರಿಯರೂಪಗಳ

ಈಶನ ದಯದಿ ಸದ್ಯೋಚಿಸಿ ಹಿಗ್ಗುತ

ವಾಸುದೇವನೆ ಸರ್ವೇಶನೆಂದರಿಯಲು 2


ವಿಷಯೀಕ್ಷಣಗಳು ಕ್ಷಣಸುಖವೀವುವು

ಶೇಷಗಿರೀಶನೆ ಅಕ್ಷಯಸುಖದನು ಸುಖಮಯನು

ದೋಷದೂರ ಶ್ರೀ ಲಕ್ಷ್ಮಿಯ ರಮಣನೆ

ಪೋಷಕ ಮನೋಗತ ತಿಮಿರಕೆ ಪೂಷನು 3


ತಾರಕ ಗುರು ಉದಾರ ಸುಮನದಲಿ

ದಾರಿಯ ತೋರಿಸಿ ಉದ್ಧರಿಸಲು ಬಹು ದಯದಿ

ವಿಧಾತೃ ಸಮೀರ ಸುಮೇಧರು ಚಿಂತಿಪ

ವಾರಿಧಿಶಯ್ಯ ಪರೇಶನು ತೋರುವ 4


ಸಪ್ತ ಸುಸ್ಥಾನದಿ ಮರುತಾದಿಗಳೊಡೆ

ಗುಪ್ತನಾಗಿಪ್ಪ ನಿರ್ಲಿಪ್ತ ನಿರಾಮಯ ಶ್ರೀಕಪನು

ಸುಪ್ತಿ ಜಾಗೃತ ಸ್ವಪ್ನಾದಿ ಕಾಲದಿ ಕಾಯುವ

ಆಪ್ತ ಸುಹೃದನಿವಗಾರು ಈಡಿಲ್ಲವು 5


ಪಂಚ ಸುನಾಡಿಯೋಳ್ ಪಂಚ ಸುವರ್ಣದಿ

ಪಂಚ ಸುರೂಪ ಸ್ವತಂತ್ರನು ಇರುತಿಹ ಶ್ರೀಹರಿಯು

ವಿರಿಂಚ ಸಮೀರ ಸುಮೇಧರು ಬಹು ವಿಧ

ಚಿಂತಿಸಿ ನಮಿಪ ಪ್ರಪಂಚದ ಒಡೆಯನು 6


ಪದುಮದ ದಳಗಳು ಐದು ಮೂರುಂಟು

ಅದರ ಮೂಲದಿ ಇಹ ಸದಮಲ ಲಕ್ಷ್ಮೀಶ

ಬಾಧಿಪ ಕರ್ಮವ ಸುಡುವ ಸಂಕರುಷಣ

ಸದಮಲ ಪೊರೆಯುವ ಒಳಹೊರಗೆ 7


ಶ್ರವಣ ಮನನ ಸುಧ್ಯಾನದ ಬಲವು

ಶ್ರೀಶನೊಳ್ ಭಕುತಿಯು ನಿಶ್ಚಯ ಸಾಧನ ಗುರುಮಯದಿ

ಶ್ರೀಶನ ಮಹಿಮೆಗಳರಿತು ಸದೃಷದಿ

1ಸುರತಟಿನಿಯಪೋಲು ಸರಿಪ ಪ್ರೇಮವೆ ಭಕ್ತಿ 8


ಮುಕುತಿ ಕೊಡುವ ಜ್ಞಾನ ಭಕುತಿಲಿ ಬರುವುದು

ಸುಖಮಯ ಶ್ರೀಶನ ದಯವು ಇಲ್ಲದೆ ಇದು ಸಿಕ್ಕದಯ್ಯ

ವಿಕಸಿತಾಬ್ಜಜ ತಾತ ಪ್ರಸನ್ನ ಶ್ರೀನಿವಾಸ

ಶ್ರೀಕರ ವ್ಯಾಸ ರಾಮ ಕೃಷ್ಣ ನೃಹರಿ ಕಾಯ್ವ 9

***

by ಪ್ರಸನ್ನ ಶ್ರೀನಿವಾಸದಾಸರು
ಸಾಧನ ದೇಹವಿದುಶ್ರೀ ಪದುಮೇಶ ದಯದಿ ಕೊಟ್ಟ ದೇಹವಿದು ಪ

ವಿಹಿತಾವಿಹಿತವು ಈರ್ವಿಧ ಕರ್ಮದಿವಿಹಿತವ ಪಿಡಿದು ಅಕಾಮ್ಯದಿ ಸಮ್ಯಕ್ ಆಚರಿಸಿಅಹಿಪಶಯ್ಯನ ಸನ್ಮಹಿಮೆಗಳರಿತು ವರಾಹನ ದಯದಲಿ ಪರಸುಖ ಪೊಂದಲು 1

ಬೇಸರ ತೊರೆದು ಸುಶಾಸ್ತ್ರವನೋದಿಸಾಸಿರ ನಾಮನಭಾಸುರಗುಣಕ್ರಿಯರೂಪಗಳಈಶನ ದಯದಿ ಸದ್ಯೋಚಿಸಿ ಹಿಗ್ಗುತವಾಸುದೇವನೆ ಸರ್ವೇಶನೆಂದರಿಯಲು 2

ವಿಷಯೀಕ್ಷಣಗಳು ಕ್ಷಣಸುಖವೀವುವುಶೇಷಗಿರೀಶನೆ ಅಕ್ಷಯಸುಖದನು ಸುಖಮಯನುದೋಷದೂರ ಶ್ರೀ ಲಕ್ಷ್ಮಿಯ ರಮಣನೆಪೋಷಕ ಮನೋಗತ ತಿಮಿರಕೆ ಪೂಷನು 3

ತಾರಕಗುರುಉದಾರ ಸುಮನದಲಿದಾರಿಯ ತೋರಿಸಿ ಉದ್ಧರಿಸಲು ಬಹು ದಯದಿವಿಧಾತೃಸಮೀರಸುಮೇಧರು ಚಿಂತಿಪವಾರಿಧಿಶಯ್ಯ ಪರೇಶನು ತೋರುವ 4

ಸಪ್ತ ಸುಸ್ಥಾನದಿ ಮರುತಾದಿಗಳೊಡೆಗುಪ್ತನಾಗಿಪ್ಪ ನಿರ್ಲಿಪ್ತ ನಿರಾಮಯ ಶ್ರೀಕಪನುಸುಪ್ತಿಜಾಗೃತ ಸ್ವಪ್ನಾದಿ ಕಾಲದಿ ಕಾಯುವಆಪ್ತ ಸುಹೃದನಿವಗಾರು ಈಡಿಲ್ಲವು 5

ಪಂಚ ಸುನಾಡಿಯೋಳ್ ಪಂಚ ಸುವರ್ಣದಿಪಂಚ ಸುರೂಪ ಸ್ವತಂತ್ರನು ಇರುತಿಹ ಶ್ರೀಹರಿಯುವಿರಿಂಚಸಮೀರಸುಮೇಧರು ಬಹು ವಿಧಚಿಂತಿಸಿ ನಮಿಪ ಪ್ರಪಂಚದ ಒಡೆಯನು 6

ಪದುಮದ ದಳಗಳು ಐದು ಮೂರುಂಟುಅದರ ಮೂಲದಿ ಇಹ ಸದಮಲ ಲಕ್ಷ್ಮೀಶಬಾಧಿಪ ಕರ್ಮವ ಸುಡುವ ಸಂಕರುಷಣಸದಮಲ ಪೊರೆಯುವ ಒಳಹೊರಗೆ 7

ಶ್ರವಣ ಮನನ ಸುಧ್ಯಾನದ ಬಲವುಶ್ರೀಶನೊಳ್ ಭಕುತಿಯು ನಿಶ್ಚಯ ಸಾಧನ ಗುರುಮಯದಿಶ್ರೀಶನ ಮಹಿಮೆಗಳರಿತು ಸದೃಷದಿಸುರತಟಿನಿಯಪೋಲು ಸರಿಪ ಪ್ರೇಮವೆ ಭಕ್ತಿ 8

ಮುಕುತಿ ಕೊಡುವ ಜ್ಞಾನ ಭಕುತಿಲಿ ಬರುವುದುಸುಖಮಯ ಶ್ರೀಶನ ದಯವು ಇಲ್ಲದೆ ಇದು ಸಿಕ್ಕದಯ್ಯವಿಕಸಿತಾಬ್ಜಜತಾತಪ್ರಸನ್ನ ಶ್ರೀನಿವಾಸಶ್ರೀಕರ ವ್ಯಾಸ ರಾಮ ಕೃಷ್ಣ ನೃಹರಿ ಕಾಯ್ವ 9
*******