kruti by ವೀರನಾರಾಯಣ Veeranarayana
ಹುಡುಕತಲಿ ಹೆನವನಾ ಮಾಧವನಾ ಪ
ಹಿಡಿಯುತ ಭಕುತಿಯ ಸೊಡರನು ಕರದೊಳುಕಡುಗತ್ತಲೆಯೊಳು ಕಡೆಗಾಣದೆನಾ 1
ಸಿದ್ಧವೇದದೊಳು ಕದ್ದಡಗಿದನಾಬುದ್ಧಿಯ ತಟ ಗಡ ನೆದ್ದಿ ಕದಡಿನಾ 2
ಜಗ ತುಂಬಿಹನೆಂದು ನಿಗಮವು ಸಾರಲುಜಗದೊಳಗೆಲ್ಲಾ ಖಗವಾಹನನ 3
ಜ್ಞಾನಿಗಳಿಗೆ ತಾ ಕಾಂಬನು ಎಂಬರುಧೇನಿಸುತಲಿ ಸಾಮಾನ್ಯನಲ್ಲನ 4
ಎದೆಯ ಮರೆಯಲಿ ಹುದುಗಿ ಮೆರೆವನಾಗದುಗಿನ ವೀರನಾರಾಯಣನನ್ನ 5
***