..
kruti by ವಿದ್ಯಾರತ್ನಾಕರತೀರ್ಥರು vidyaratnakara teertharu
ಬಾರೋ ಕ್ಷೀರೋದಧಿಶಯನ ಹರೆ ನಿನ್ನ
ಕರುಣವ ಎನ್ನೊಳು ತೋರೊ ಪ
ನಂದನಂದನ ಹೃನ್ಮಂದಿರಕೆ ನೀ ಬೇಗ ಬಾರೊ ಅ.ಪ
ಶೌರೇ ನಿಂಗೆ ಸೇರಿದಾವನಾಗಿ
ಇನ್ಯಾರಿಗೆ ಬೇಡಲೊ ಮುರಾರೆ ಕರುಣಿಸಿ ಬಾರೊ 1
ಕೃಷ್ಣಾಮೂರ್ತೆ ಸೃಷ್ಟಿಪಾಲನಾಗಿ
ಪರಮೇಷ್ಠಿ ಜನಕ ನಿಂಗಿಷ್ಟೂಪೇಕ್ಷೆ ಯಾಕೋ 2
ಇಂದಿರೇಶ ಚಂದಿರವದನ
ಮುಚುಕುಂದವರದ ಗೋವಿಂದ ಕರುಣಿಸಿ ಬಾರೊ 3
ಮಂಗಳಾಂಗ ಅಂಗಜ ಜನಕ
ಯದುಪುಂಗವ ಕೈಬಿಡದಾಂಗೆ ಪಾಲಿಸು 4
ನಾಮಗಿರಿಸ್ವಾಮಿ ನಾರಸಿಂಹ
ಬಲರಾಮ ಸೋದರ ಪ್ರಣಾಮ ಮಾಡುವೆ ಬಾರೊ 5
***