Showing posts with label ಮಾನವನಾದ ಮ್ಯಾಲ ತಾನಾರೆಂದರಿಯಬೇಕು gurumahipati. Show all posts
Showing posts with label ಮಾನವನಾದ ಮ್ಯಾಲ ತಾನಾರೆಂದರಿಯಬೇಕು gurumahipati. Show all posts

Wednesday, 1 September 2021

ಮಾನವನಾದ ಮ್ಯಾಲ ತಾನಾರೆಂದರಿಯಬೇಕು ankita gurumahipati

ಕಾಖಂಡಕಿ ಶ್ರೀ ಕೃಷ್ಣದಾಸರು

ಮಾನವನಾದ ಮ್ಯಾಲ ತಾನಾರೆಂದರಿಯಬೇಕು ಪ 


ಅನುಭವಿಗಳ ಕಂಡೆರಗಲಿಬೇಕು | ತನುಮನದಲಿ ನಿಷ್ಠೆಯು ಬಂದಿರಬೇಕು | ತನು ಧನ ಮದದಲಿ ಹೊರತಾಗಿರಬೇಕು | ಉಣಲುಡುವಲಿ ಹರಿಯಚ್ಚರಬೇಕು 1 

ಎಲ್ಲಿಂದ ಧರೆಯೊಳು ಜನ್ಮಕ ಬಂದೇ | ಇಲ್ಲ್ಲಿಂದ ಪಯಣವು ಎಲ್ಲಿಗೆ ಮುಂದೇ | ಎಲ್ಲ ವಿಚಾರಿಸು ಗುರು ಮುಖದಿಂದಾ | ಫುಲ್ಲನಾಭನೆ ಸೇರಿ ಬದುಕಬೇಕೆಂದ 2 

ತನ್ನ ತಾ ಮರೆದು ನೀ ತಿರುಗಲಿ ಬೇಡಾ | ಅನ್ಯರ ನಿಂದ್ಯಪಸ್ತುತಿ ಮಾಡಬೇಡಾ | ಚನ್ನಾಗಿ ಶಾಂತಿಯ ನೆಲೆಬಲಿ ಬೇಡಾ | ಕಣ್ಣಿದ್ದು ಕುರುಡ ನೀನಾಗಲಿ ಬೇಡಾ 3 

ಏನು ತೋರುವದೆಲ್ಲಾ ಹರಿಯಾಜ್ಞೆದೆಂದು | ನಾನೇನು ಕರ್ತನಲ್ಲಿದಕೆಂದು | ಅನುಭವದಲಿ ಸಮದೃಷ್ಠಿಗೆ ಬಂದು | ಘನ ಗುರು ಪಾದಕ ಭಾವದಿ ಹೊಂದು 4 

ಹೊತ್ತು ಹೋಗದ ಮಾತ ನಾಡಲೀ ಬೇಡಾ | ಮುತ್ತಿನಂಥಾ ಜನ್ಮ ದೊರಿಯದುಗಡಾ | ಸತ್ಯಜ್ಞಾನಾಮೃತ ನುಂಡವ ಪ್ರೌಢಾ | ಕರ್ತ ಮಹಿಪತಿ ಸುತ ಸುರಿದ ನೋಡಾ 5

***