Showing posts with label ಬಾರನ್ಯಾತಕೆ ಕೃಷ್ಣ ಬಾರನ್ಯಾತಕೆ ನಾರಿಯರ prananatha vittala. Show all posts
Showing posts with label ಬಾರನ್ಯಾತಕೆ ಕೃಷ್ಣ ಬಾರನ್ಯಾತಕೆ ನಾರಿಯರ prananatha vittala. Show all posts

Thursday, 5 August 2021

ಬಾರನ್ಯಾತಕೆ ಕೃಷ್ಣ ಬಾರನ್ಯಾತಕೆ ನಾರಿಯರ ankita prananatha vittala

 ..


..

kruti by bagepalli shesha dasaru ಬಾಗೇಪಲ್ಲಿ ಶೇಷದಾಸರು


ಬಾರನ್ಯಾತಕೆ ಕೃಷ್ಣ ಬಾರನ್ಯಾತಕೆ ಪ


ನಾರಿಯರ ಭಯವಿಂತಿಹುದೊ ಧೀರ ಕೃಷ್ಣಗೆಅ.ಪ


ಹರಿಯ ಮನಕೆ ಹರುಷಪಡಿಸಿ

ಹರಿಯ ಕರೆಸಿ ಮನದೊಳಿರಿಸಿ

ಹೊರಗೆ ಬಿಡರೆಂಬೊ ಭಯಕೆ

ಮರೆಯೊಳಿದ್ದುಕಾಲ ಕಳೆಯುವ 1


ಮದಗಜಗಮನೆಯರೆಲ್ಲ

ಮದನಕದನ ದೊಳಗೆ ಸೋಲಿಸಿ

ಮುದದಿ ಎನ್ನಬಿಡದೆ ಮನೆಯೊಳು

ಸದರದಿಂದ ನೋಡುವರೆಂದು 2


ಆಣಿ ಮುತ್ತಿನ ಮಾತನಾಡಿ

ಜಾಣ ಪ್ರಾಣನಾಥ ವಿಠಲನ

ವಿನಯದಿಂದ ಕರೆದು ತಂದರೆ

ವನಜಮುಖಿಯೆ ಹರುಷ ಪಡುವೆ 3

***