ರಾಗ ಕಾಂಭೋಜ ಆದಿತಾಳ
ಮಂದರಧರನೆ ಮನೆ ಪೊಕ್ಕು ಬದುಕುವೆನೆ
ಇಂದು ನಾಳೆ ನಾಡಿದ್ದೆಂಬ ಮಂದಮತಿಗಿನ್ನೇನೆಂಬೆ ||
ಹಿಂದೆ ಮುಂದೆ ಸುತ್ತಿ ಬಪ್ಪ ಮೃತ್ಯು ವಿಚಾರಿಸದೆ
ತಂದು ತಂದು ಕೆಡಹುತಲಿದೆ ಭವಾಂಬುಧಿಯಲ್ಲಿ ||
ತಂದೆ ಇಂದು ಪರಿಯಂತ ಈ ಬೆಂದ ಮನದ ದೀಪ್ತಿಯ
ತಂದೆ ಕರುಣಿಸೆಲೊ ಪುರಂದರವಿಠಲ ವಿಭುವೆ ||
*******