ಕಾಖಂಡಕಿ ಶ್ರೀ ಕೃಷ್ಣದಾಸರು
ಸುಮ್ಮನೆ ದೋರೈಯ್ಯಾ | ರಮ್ಮೆಯ ಕರದಲಿ | ಒಮ್ಮೆಗೆ ಅಗಲದೆ ನಮಿಸಿಕೊಳುತಿಹ ಪಾದಾ ಪ
ಇಳೆಯ ನೆರೆ ಬೇಡುವ ನೆವದಲಿ ಬಂದು ಬಲಿಗುದ್ಧರಿಸೆಂದು | ಹಲವು ಕಾಲದಿ ಶಿಲೆಯಾದಂಗನೆಗೆ ಸತಿಗತಿ ನೀಡಿದ ಪಾದಾ 1
ಉರಗಾಶರ ಬರೆ ಉಂಗುಟ ಲೋತ್ತಿನರ ನುಳಹಿದ ಕೀರ್ತಿ | ಸುಯೋಧನನುರುಳಿಸಿಗೆಡಹಿದಾ ಪಾದಾ 2
ತಂದೆ ಮಹಿಪತಿ ಪ್ರಭುದಯದಿಂದಲಿ ಎಂದೆಂದು | ಮುನಿಜನ ನಯನ ಚಕೋರರ ಚಂದಿರವಾಗಿಹ ಪಾದಾ 3
***