ರಾಗ ಕಲ್ಯಾಣಿ ಆದಿತಾಳ
4th Audio by Mrs. Nandini Sripad
ಶ್ರೀ ಗೋಪಾಲದಾಸರ ರಚನೆ
ಎನ್ನ ಬಿನ್ನಪ ಕೇಳು ಧನ್ವಂತ್ರಿ ದಯಮಾಡೋ ।
ಸಣ್ಣವನು ಇವ ಕೇವಲಾ ॥ ಪ ॥
ಬನ್ನ ಬಡಿಸುವ ರೋಗವನ್ನು ಮೋಚನೆ ಮಾಡಿ ।
ಚೆನ್ನಾಗಿ ಪಾಲಿಸುವದೋ ಸ್ವಾಮಿ ॥ ಅ ಪ ॥
ಆರೋಗ್ಯ ಆಯುಷ್ಯ ಐಶ್ವರ್ಯವೆಂಬ ಈ ।
ಮೂರು ವಿಧ ವಸ್ತಂಗಳೂ ।
ನಾರಾಯಣನ ಭಜಕರಾದವರ ಸಾಧನಕೆ ।
ಪೂರಕವಾಗಿಪ್ಪವೋ ।
ಘೋರ ವ್ಯಭಿಚಾರ ಪರನಿಂದೆ ಪರವಿತ್ತ ಅಪ -।
ಹಾರ ಮಾಡಿದ ದೋಷದೀ ॥
ದಾರಿದ್ರರಾಗುವರು ಮೂರು ವಿಧದಿಂದಲಿ ।
ಕಾರಣನು ನೀನೆ ದುಷ್ಕರ್ಮ ಪರಿಹರಿಸುವದು ॥ 1 ॥
ವಸುಮತಿಯ ಮ್ಯಾಲಿನ್ನು ಅಸುರ ಜನರೆ ಬಹಳ ।
ವಶವಲ್ಲ ಕಲಿಯ ಬಾಧೆ ।
ಬಿಸಲಿಂದ ಪೀಡಿತಾವಾದ ಸಸಿಗಾಳಂತೆ ।
ಶಿಶುವುಗಳು ನಾವಿಪ್ಪೆವು ।
ಅಸುರಾರಿ ನಿನ್ನ ಕರುಣಾಮೃತದ ಮಳೆಗರೆದು ।
ಕುಶಲದಲಿ ಪಾಲಿಸುವದು ॥
ಕೆಸರಿಂದ ಕೆಸರು ತೊಳೆದಂತೆ ಕರ್ಮದ ಪಥವು ।
ಅಸುನಾಥ ಹರಿಯೇ ಪೊರೆಯೋ ಸ್ವಾಮಿ ॥ 2 ॥
ಆನ್ಯರನು ಭಜಿಸದಲೆ ನಿನ್ನನೆ ತುತಿಸುತ್ತ ।
ನಿನ್ನ ಚಿಹ್ನೆಗಳ ಧರಿಸೀ ।
ನಿನ್ನವರವನೆನಿಸಿ ನಿನ್ನ ನಾಮೋಚ್ಚರಿಸಿ ।
ನಿನ್ನಿಂದ ಉಪಜೀವಿಸೀ ।
ಅನ್ನ ಆರೋಗ್ಯ ಅಲ್ಪವು ಆಗಿ ಪರರಿಗೆ ।
ಇನ್ನು ಆಲ್ಪರಿಯಬೇಕೇ ॥
ನಿನ್ನ ಸಂಕಲ್ಪ ಭಕುತರನ ಪೋಷಕನೆಂಬ ।
ಘನ್ನ ಬಿರಿದಿನ್ನು ಉಳಹೊ ಸಲಹೊ ॥ 3 ॥
ಆದಿವ್ಯಾಧಿಗಳು ಉನ್ಮಾದ ವಿಭ್ರಮ ನಾನಾ ।
ಬಾಧಿಗೌಷಧವು ನೀನೇ ।
ಈ ದಾವ ನಿನ್ನ ಕರದಲಿ ಕಲಶ ಸುಧೆ ಎರೆದು ।
ಸಾಧುಗಳ ಸಂತೈಸುವೀ ।
ಮೋದ ಬಡಿಸುವಿ ನಿನ್ನ ಸಾಧಿಸೂವರಿಗೆ ಶು - ।
ಭೋದಯಂಗಳನು ಈವೀ ॥
ಆದರಿಸಿ ಇವಗೆ ತವಪಾದ ಧ್ಯಾನವನಿತ್ತು ।
ಸಾಧುಗಳೊಳಗಿರಿಸಿ ಮೋದ ಕೊಡು ಸರ್ವದಾ ॥ 4 ॥
ನಿನ್ನವಾರಲ್ಲಿ ಇವಗೆ ಇನ್ನು ರತಿಯನೆ ಕಂಡು ।
ನಿನ್ನವಾನೆಂದು ಅರಿದು ।
ನಿನ್ನ ನಾ ಪ್ರಾರ್ಥಿಸಿದೆ ಅನ್ಯರಿಗೆ ಅಲ್ಪರಿಯೆ ।
ಎನ್ನ ಪಾಲಿಸುವ ಧೊರಿಯೆ ।
ಎನ್ನ ಮಾತಲ್ಲವಿದು ಎನ್ನ ಹಿರಿಯರ ಮಾತು ।
ಮನ್ನಿಸಾಬೇಕು ಕರುಣಿ ॥
ಅನ್ನಂತ ಗುಣಪೂರ್ಣ ಗೋಪಾಲವಿಠ್ಠಲ ।
ಇನ್ನಿದನೆ ಪಾಲಿಸುವದೋ ಸ್ವಾಮಿ ॥ 5 ॥
***
Enna binnapa kelu dhanvantri dayamaadu sannavanu iva kevala
Bannabadisuva rogavannu mochane maadi chennaagi paalisuvudu karuni ||pa||
Aarogya aayushya aishvaryavembo I ee muruvidhavastugalu
Naarayanana bhajakaraadavara saadhanake purnavaagippuvu
Ghora vyabhichaara paraninde para vittaapahaaramaadida doshadi
Daridraraaguvaru muru vidhadindali kaarananu nine dushkarma pariharisuvudu hariye ||1||
Vasumatiya melinnu asura janara bahala vashavalla kaliya baadhe
Bisilinda piditavaada sasigalante shishugalu naavippevu
Asuraari ninna karunaamrutada malegaredu kushaladi paalisuvusu
Kesarinda kesaru toledante karmada pathavu asunaatha hariye poreyo swaami ||2||
Aadivyaadhigalu unmaada vibhrama naanaa baadhegaushadhavu nine
He deva ninna karakalasha sudheveredu saadhugala santaisuvi
Modabadisuvi ninna saadhisuvarige shubhodayangalanivi
Aadarisi ivage tavapaadadhyaanavanittu saadhugalolagittu modakodu sarvadaa ||3||
Anyaranu bhajisadale ninnane stutisuta ninna cihnegala dharisi
Ninnavaranenisi ninna naamoccarisi ninninda upajivisi
Anna aarogyakke alpa jivigalige innu aalpariyabeke
Ninna sankalpa bhaktara poshakanemba ghanna birudinnu uluho salaho ||4||
Ninnavarali ivage innu ratiyannukottu ninnavanendu aridu
Ninna naa praarthisida anyarige alpariye enna paalisuva doreye
Enna maatallavidu enna hiriyara maatu mannisabeku karuni
Ananta gunapurna gopaala vithala innidane paalisuvudo prabhuve ||5||
***
pallavi
enna binnapa kELu dhanvantri dayamADu saNNavanu iva kEvala
anupallavi
bannabaDisuva rOgavannu mOcane mADi cennaagi pAlisuvudu karuNI
caraNam 1
ArOgya AyuSya aishvaryavembo I mUruvidhavastugaLu
nArayaNana bhajakarAdavara sAdhanake pUrNavAgippuvu
ghOra vyabicAra paraninde para vittApahAramADida dOSadi
daridrarAguvaru mUru vidhadindali kAraNanu nIne duSkarma pariharisuvudu hariye
caraNam 2
vasumatiya mElinnu asura janara bahaLa vashavalla kaliya bAdhe
bisilinda pIDitavAda sasigaLante shishugaLu nAvippevu
asuraari ninna karuNAmrutada maLegaredu kushaladi pAlisuvusu
kesarinda kesaru toLedante karmada pathavu asunAtha hariye poreyo svAmi
caraNam 3
Adi vyAdhigaLu unmaada vibhrama nAnA bAdhegauSadhavu nIne
hE dEva ninna karakalasha sudheveredu sAdhugaLa santaisuvi
mOdabaDisuvi ninna sAdhisuvarige shubhOdayangaLanIvi
Adarisi ivage tava pAda dhyAnavanittu sAdhugaLoLagiTTu mOdakoDu sarvadA
caraNam 4
anyaranu bhajisadale ninnane stutisuta ninna cihnegaLa dharisi
ninnavaranenisi ninna nAmOccarisi ninninda upajIvisi
anna ArOgyakke alpa jIvigaLige innu AlpariyabEke
ninna sankalpa bhaktara pOSakanemba ghanna birudinnu uLuho salaho
caraNam 5
ninnavarali ivage innu ratiyannukoTTu ninnavanendu aridu
ninna nA praarthisida anyarige alpariye enna pAlisuva doreye
enna mAtallavidu enna hiriyara mAtu mannisabEku karuNi
ananta guNapUrNa gOpAlaviThala innidane pAlisuvudo svAmi
***
(Enna binnapa kelu dhanvantri)
ಎನ್ನ ಭಿನ್ನಪ ಕೇಳು ಧನ್ವಂತ್ರಿ ದಯಮಾಡು ಸಣ್ಣವನು ಇವ ಕೇವಲ |
ಬನ್ನಬಡಿಸುವ ರೋಗವನ್ನು ಮೋಚನೆ ಮಾಡಿ ಚೆನ್ನಾಗಿ ಪಾಲಿಸುವುದು ಕರುಣಿ ||ಪ||
ಆರೋಗ್ಯ ಆಯುಶ್ಯ ಐಶ್ವರ್ಯವೆಂಬೋ ಈ ಮೂರುವಿಧ ವಸ್ತುಗಳು
ನಾರಾಯಣನ ಭಜಕರಾದವರ ಸಾಧನಕೆ ಪೂರ್ಣವಾಗಿಪ್ಪುವು
ಘೋರ ವ್ಯಭಿಚಾರ ಪರನಿಂದೆ ಪರ ವಿತ್ತಾಪಹಾರ ಮಾಡಿದ ದೋಷದಿ
ದರಿದ್ರರಾಗುವರು ಮೂರು ವಿಧದಿಂದಲಿ ಕಾರಣನು ನೀನೆ ದುಷ್ಕರ್ಮ ಪರಿಹರಿಸುವುದು ಹರಿಯೇ ||೧||
ವಸುಮತಿಯ ಮೇಲಿನ್ನು ಅಸುರ ಜನರ ಬಹಳ ವಶವಲ್ಲ ಕಲಿಯ ಬಾಧೆ
ಬಿಸಿಲಿಂದ ಪೀಡಿತವಾದ ಸಸಿಗಳಂತೆ ಶಿಶುಗಲು ನಾವಿಪ್ಪೆವು
ಅಸುರಾರಿ ನಿನ್ನ ಕರುಣಾಮೃತದ ಮಳೆಗರೆದು ಕುಶಲದಿ ಪಾಲಿಸುವುದು
ಕೆಸರಿಂದ ಕೆಸರು ತೊಳೆದಂತೆ ಕರ್ಮದ ಪಥವು ಅಸುನಾಥ ಹರಿಯೇ ಪೊರೆಯೋ ಸ್ವಾಮಿ ||೨||
ಆದಿವ್ಯಾಧಿಗಳು ಉನ್ಮಾದ ವಿಭ್ರಮ ನಾನಾ ಬಾಧೆಗೌಷಧವು ನೀನೆ
ಹೇ ದೇವ ನಿನ್ನ ಕರಕಲಶ ಸುಧೆಗರೆದು ಸಾಧುಗಳ ಸಂತೈಸುವಿ
ಮೋದಬಡಿಸುವಿ ನಿನ್ನ ಸಾಧಿಸುವರಿಗೆ ಶುಭೋದಯಂಗಳನಿವೀ
ಆದರಿಸಿ ಇವಗೆ ತವಪಾದ ಧ್ಯಾನವನಿತ್ತು ಸಾಧುಗಲೊಳಗಿತ್ತು ಮೋದಕೊಡು ಸರ್ವದಾ ||೩||
ಆನ್ಯರನು ಭಜಿಸದಲೆ ನಿನ್ನನೆ ಸ್ತುತಿಸುತ ನಿನ್ನ ಚಿಹ್ನೆಗಳ ಧರಿಸಿ
ನಿನ್ನವರನಿಸಿ ನಿನ್ನ ನಾಮೋಚ್ಚರಿಸಿ ನಿನ್ನಿಂದ ಉಪಜೀವಿಸಿ
ಅನ್ನ ಆರೋಗ್ಯಕ್ಕೆ ಅಲ್ಪ ಜೀವಿಗಳಿಗೆ ಇನ್ನು ಆಲ್ಪರಿಯಬೇಕೆ
ನಿನ್ನ ಸಂಕಲ್ಪ ಭಕ್ತರ ಪೋಷಕನೆಂಬ ಘನ್ನ ಬಿರುದಿನ್ನು ಉಲುಹೊ ಸಲಹೊ ||೪||
ನಿನ್ನವರಲಿ ಇವಗೆ ಇನ್ನು ರತಿಯನ್ನು ಕೊಟ್ಟು ನಿನ್ನವನೆಂದು ಅರಿದು
ನಿನ್ನ ನಾ ಪ್ರಾರ್ಥಿಸಿದ ಅನ್ಯರಿಗೆ ಅಲ್ಪರಿಯೆ ಎನ್ನ ಪಾಲಿಸುವ ದೊರೆಯೆ
ಎನ್ನ ಮಾತಲ್ಲವಿದು ಎನ್ನ ಹಿರಿಯರ ಮಾತು ಮನ್ನಿಸಬೆಕು ಕರುಣಿ
ಅನಂತ ಗುಣಪೂರ್ಣ ಗೋಪಾಲವಿಠಲ ಇನ್ನಿದನೆ ಪಾಲಿಸುವುದೋ ಪ್ರಭುವೇ ||೫||
****
ಎನ್ನ ಬಿನ್ನಪ ಕೇಳು
ಧನ್ವಂತ್ರಿ ದಯಮಾಡು ಸಣ್ಣವನು ಇವ ಕೇವಲ
ಬನ್ನಬಡಿಸುವ ರೋಗವನ್ನು ಯೋಚನೆ ಮಾಡಿ
ಚೆನ್ನಾಗಿ ಪಾಲಿಸುವುದು ಕರುಣಿ ||ಪ||
ಆರೋಗ್ಯ ಆಯುಷ್ಯ ಐಶ್ವರ್ಯವೆಂಬೊ ಈ ಮೂರು ವಿಧ ವಸ್ತುಗಳು ನಾರಾಯಣನ ಭಜಕರಾದವರ ಸಾಧನಕೆ ಪೂರ್ಣವಾಗಿಪ್ಪುವು ಘೋರ ವ್ಯಭಿಚಾರ ಪರನಿಂದೆ ಪರವಿತ್ತಾಪಹಾರ ಮಾಡಿದ ದೋಷದಿ ದರಿದ್ರರಾಗುವರು ಮೂರು ವಿಧದಿಂದಲಿ ಕಾರಣನು ನೀನೆ ದುಷ್ಕರ್ಮ ಪರಿಹರಿಸುವುದು ಹರಿಯೆ ||೧||
ವಸುಮತಿಯ ಮೇಲಿನ್ನು ಅಸುರಜನರೆ ಬಹಳ ವಶವಲ್ಲ ಕಲಿಯ ಬಾಧೆ ಬಿಸಿಲಿಂದ ಪೀಡಿತವಾದ ಸಸಿಗಳಂತೆ ಶಿಶುಗಳು ನಾವಿಪ್ಪೆವು
ಅಸುರಾರಿ ನಿನ್ನ ಕರುಣಾಮೃತದ ಮಳೆಗರೆದು ಕುಶಲದಿ ಪಾಲಿಸುವುದು ಕೆಸರಿಂದ ಕೆಸರು ತೊಳೆದಂತೆ ಕರ್ಮದ ಪಥವು ಅಸುನಾಥ ಹರಿಯೆ ಪೊರೆಯೊ ಸ್ವಾಮಿ ||೨||
ಆದಿವ್ಯಾಧಿಗಳು ಉನ್ಮಾದ ವಿಭ್ರಮ ನಾನಾ ಬಾಧೆಗೌಷಧವು ನೀನೆ
ಹೇದೇವ ನಿನ್ನ ಕರಕಲಶಸುಧೆಗರೆದು ಸಾಧುಗಳ ಸಂತೈಸುವಿ ಮೋದಬಡಿಸುವಿ ನಿನ್ನ ಸಾಧಿಸುವರಿಗೆ ಶುಭೋದಯಂಗಳನೀವಿ
ಆದರಿಸಿ ಇವಗೆ ತವಪಾದಧ್ಯಾನವಿತ್ತು ಸಾಧುಗಳೊಳಗಿಟ್ಟು ಮೋದಕೊಡು ಸರ್ವದಾ ||೩||
ಅನ್ಯರನು ಭಜಿಸದಲೆ ನಿನ್ನನೆ ಸ್ತುತಿಸುತ ನಿನ್ನ ಚಿಹ್ನೆಗಳ ಧರಿಸಿ ನಿನ್ನವರವನೆನಿಸಿ ನಿನ್ನ ನಾಮೋಚ್ಚರಿಸಿ ನಿನ್ನಿಂದ ಉಪಜೀವಿಸಿ ಅನ್ನ ಆರೋಗ್ಯಕ್ಕೆ ಅಲ್ಪಜೀವಿಗಳಿಗೆ ಇನ್ನು ಅಲ್ಲರಿಯಬೇಕೆ ನಿನ್ನ ಸಂಕಲ್ಪ ಭಕ್ತರಪೋಷಕನೆಂಬ ಘನ್ನ ಬಿರುದನ್ನು ಉಳುಹೊ ಸಲಹೊ ||೪||
ನಿನ್ನವರಲಿ ಇವಗೆ ಇನ್ನು ರತಿಯನ್ನು ಕೊಟ್ಟು ನಿನ್ನವನೆಂದು ಅರಿದು
ನಿನ್ನ ನಾ ಪ್ರಾರ್ಥಿಸಿದೆ ಅನ್ಯರಿಗೆ ಅಲ್ಲರಿಯೆ ಎನ್ನ ಪಾಲಿಸುವ ದೊರೆಯೆ
ಎನ್ನ ಮಾತಲ್ಲವಿದು ಎನ್ನ ಹಿರಿಯರ ಮಾತು ಮನ್ನಿಸಬೇಕು ಕರುಣಿ ಅನಂತಗುಣಪೂರ್ಣ ಗೋಪಾಲವಿಠಲ ಇನ್ನಿದನೆ ಪಾಲಿಸುವುದೊ ಸ್ವಾಮಿ ||೫||
***