Showing posts with label ಭಾರತೀ ರಮಣ ಪಾಲಿಸು ಕರುಣ ಶ್ರೀರಾಮನ ಪದ ನಿಜ ಶರಣ lakshmikanta. Show all posts
Showing posts with label ಭಾರತೀ ರಮಣ ಪಾಲಿಸು ಕರುಣ ಶ್ರೀರಾಮನ ಪದ ನಿಜ ಶರಣ lakshmikanta. Show all posts

Sunday, 1 August 2021

ಭಾರತೀ ರಮಣ ಪಾಲಿಸು ಕರುಣ ಶ್ರೀರಾಮನ ಪದ ನಿಜ ಶರಣ ankita lakshmikanta

 ..

kruti by ಲಕ್ಷ್ಮೀನಾರಯಣರಾಯರು Lakshminarayanaru 


ಭಾರತಿ ರಮಣ ಪಾಲಿಸು ಕರುಣ

ಶ್ರೀರಾಮನ ಪದ ನಿಜ ಶರಣ ಪ


ಕೌರವಧಾರಣ ಭವ ಸಂಹಾರಣ

ಪರಾಶರ ಮತ ವಿಸ್ತರಣ ಅ.ಪ.


ತ್ರೇತೆಯೊಳಂಜನೆ ಉದರದಿ ಜನಿಸಿ

ಸೀತಾನಾಥನ ಪಾದಕೆ ನಮಿಸಿ

ದೌತ್ಯವ ವಹಿಸಿ ಕೀರ್ತಿಯ ಗಳಿಸಿ

ಭಕ್ತಾಗ್ರಣಿಯೆನಿಸಿದ ಗುರುವೆ 1


ದ್ವಾಪರದಲಿ ನೃಪ ಕುಲದಲಿ ಬಂದು

ಪಾಪಿ ಮಾರ್ಗದ ಪ್ರಮುಖರ ಕೊಂದು

ದ್ರೌಪದಿ ಬೇಡಿದ ಸುಮವನು ತಂದು

ಶ್ರೀ ಪತಿಗರ್ಥಿಯ ಸಲಿಸಿದ ಗುರುವೆ 2


ಕಲಿಯೊಳು ಕುಜನರ ಮತಗಳ ಜರಿದು

ಸುಲಲಿತ ಭಕ್ತಿಯ ಮತವನು ಒರೆದು

ನೆಲೆಸಲು ಲಕ್ಷ್ಮೀಕಾಂತನ ಮಹಿಮೆಯ

ತುಳುವ ವಿಪ್ರನಲಿ ಉದಿಸಿದೆ ಗುರುವೆ 3

***