Showing posts with label ಇದೇ ಇದೇ ಬ್ರಹ್ಮಮಯ ಸದಮಲಾನಂದೋದಯ mahipati. Show all posts
Showing posts with label ಇದೇ ಇದೇ ಬ್ರಹ್ಮಮಯ ಸದಮಲಾನಂದೋದಯ mahipati. Show all posts

Wednesday, 1 September 2021

ಇದೇ ಇದೇ ಬ್ರಹ್ಮಮಯ ಸದಮಲಾನಂದೋದಯ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಇದೇ ಇದೇ ಬ್ರಹ್ಮಮಯ ಸದಮಲಾನಂದೋದಯ ಸಾಧುಜನ ಹೃದಯ ಸದ್ಗುರು ದಯ ನಿಶ್ಚಯ P
ಸಾರಿಚಲ್ಲೆದ ಪೂರ್ಣ ಹರಿಯ ಸುಖ ನಿಧಾನ ಸುರಮುನಿಗಳ ಪ್ರಾಣ ಶರಣಜನರಾಭರಣ 1 
ಬಣ್ಣಬಣ್ಣಭಾಸುವ ಪುಣ್ಯಶ್ಲೋಕರಾಜೀವ ಸಣ್ಣ ದೊಡ್ಡದಲ್ಲೀವ್ಹ ಕಣ್ಣಿಗೆ ಕಾಣಿಸುವ 2 
ಗುಹ್ಯಕೆ ಗುಹ್ಯವಾದ ಮಹಾಮಹಿಮೆಯ ಬೋಧ ಮಹಿಪತಿ ಸದ್ಗೈಸಿದ ಮಹಾಗುರು ಸುಪ್ರಸಾದ 3
***

ಇದೇ ಇದೇ ಬ್ರಹ್ಮಮಯ ಸದಮಲಾನಂದೋದಯ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಇದೇ ಇದೇ ಬ್ರಹ್ಮಮಯ ಸದಮಲಾನಂದೋದಯ ಉದಯಾಸ್ತಮಾನವಿಲ್ಲದೆ ಸದೋದಿತ ಭಾಸುತಿದೆ ಧ್ರುವ ವಸ್ತುವಿದೆ ನಿತ್ಯವಾದ ಅತ್ತ್ಯೋತ್ತಮಾನಂದಬೋಧ ಎತ್ತ ನೋಡಿದರತ್ತ ಹತ್ತಿಲೆ ಸೂಸುತಲ್ಯದೆ 1 
ಸತ್ಯಸದಾನಂದೋಬ್ರಹ್ಮ ನಿತ್ಯತೃಪ್ತ ನಿರುಪಮ ಅತ್ತಿತ್ತಲಾಗದೆ ಪೂರ್ಣಮತ್ತವಾಗ್ಯೆನ್ನೊಳಗದೆ 2 
ಗುಪಿತ ನಿಜ ಸಕಲಾಗಮ ಪೂರಿತ ಶುಕಾದಿಗಳೂ ಸೇವಿತ 3 
ಸರ್ವಸಾಕ್ಷಿ ಸರ್ವಾಧಾರ ಸರ್ವರೊಳು ಸರ್ವೇಶ್ವರ ಸರ್ವಮಿದÀಂ ಖಲುಬ್ರಹ್ಮವೆಂದು ಶ್ರುತಿ ಸಾರುತಿದೆ 4 
ಇಹಪರ ಪರಿಪೂರ್ಣ ಮಹಾಗುರು ನಿರಂಜನ ಮಹಿಪತಿ ಬಾಹ್ಯಾಂತ್ರದೊಳು ಸಹಕಾರ ಸಾಕ್ಷಾತ್ಮವಿದೆ 5
***