Showing posts with label ತಿಳಿವದು ಸಜ್ಜನರು ಶಿರಿನಿಲಯ pranesha vittala ಕೇಶವಾದಿ ಪದ TILIVADU SAJJANARU SHIRINILAYA KESHAVADI PADA. Show all posts
Showing posts with label ತಿಳಿವದು ಸಜ್ಜನರು ಶಿರಿನಿಲಯ pranesha vittala ಕೇಶವಾದಿ ಪದ TILIVADU SAJJANARU SHIRINILAYA KESHAVADI PADA. Show all posts

Friday, 1 October 2021

ತಿಳಿವದು ಸಜ್ಜನರು ಶಿರಿನಿಲಯ ankita pranesha vittala ಕೇಶವಾದಿ ಪದ TILIVADU SAJJANARU SHIRINILAYA KESHAVADI PADA

Audio by Vidwan Sumukh Moudgalya

 .

ಶ್ರೀ ಪ್ರಾಣೇಶದಾಸಾರ್ಯ ವಿರಚಿತ 

 ತಂತ್ರಸಾರೋಕ್ತ ಕೇಶವಾದಿ ಇಪ್ಪತ್ತುನಾಲ್ಕು ಮೂರ್ತಿ ಲಕ್ಷಣವುಳ್ಳ ಪದ 


 ರಾಗ : ಮಲಯಮಾರುತ


ತಿಳಿವದು ಸಜ್ಜನರು ಶಿರಿನಿಲಯ ವಿಧಿಗೆ ತಾ

ವಲಿದುಸರಿದ ನುಡಿ । ತಿಳಿವದು ಸಜ್ಜನರು॥ಪ॥


ಮಾಧವನಿಪ್ಪತ್ತುನಾಲ್ಕು ಮೂರ್ತಿ ಬಹು

ಬೋಧರ ಉಕ್ತಿ ಮನಕೆ ತಂದೂ

ಶೋಧಿಸಿ ಕ್ರಮ ವ್ಯುತ್ಕ್ರಮ ಪದ್ಮಾದಿ ಗ-

ದಾದಿ ಅರ್ಧ ಸಾಂತರ ಕ್ರಮವೆಂಬುದು॥೧॥


ಕೇಶವ ವಿಷ್ಣು ಗೋವಿಂದ ವಾಮನ ಕ್ರಮ

ಈಶ ಮಧುರಿಪುರ ಮಾಧವನೂ

ದೋಷಹ ತ್ರಿವಿಕ್ರಮ ನಾರಾಯಣ

ಭಾಸಿಸುತಿಹ ವ್ಯುತ್ಕ್ರಮ ಮೂರುತಿ ಎಂದು॥೨॥


ಸಂಕರುಷಣ ಅನಿರುದ್ಧನು ಶ್ರೀಧರ

ಪಂಕಜನಾಭ ಕಂಜಾದಿ ಕ್ರಮಾ

ಬಿಂಕದ ದಾಮೋದರ ಪುರುಷೋತ್ಮಕ-

ಳಂಕ ಹೃಷೀಕಪುಪೇಂದ್ರ ಗದಾದೆಂದು॥೩॥


ಮುನಿನುತ ವಾಸುದೇವ ಅಧೋಕ್ಷಜ

ಮನಸಿಜ ಪಿತ ನರಸಿಂಹ ಹರೀ

ಅನಘರ್ಧಕ್ರಮ ಪ್ರದ್ಯುಮ್ನ ಜನಾ-

ರ್ದನ ಅಚ್ಯುತ ಕೃಷ್ಣನು ಸಾಂತರಕ್ರಮ॥೪॥


ನೀಲ ಘನಾಂಗನ ರವಿ ನಿಭ ಇಪ್ಪ-

ತ್ತುನಾಲ್ಕು ಮೂರುತಿ ಲಕ್ಷಣವೂ

ಮ್ಯಾಲಿನ ಬಲಗೈ ಮೊದಲು ಕೆಳಗೆ ಕಡಿ

ಕೇಳಿ ಶಂಖ ರವಿಗದ ಕಂಜ ಕೇಶವ॥೫॥


ಕಂಜಗದ ರವಿದರ ಧರ ನಾರಾಯಣ

ವೃಜನ ಹರವಿದರ ಪದ್ಮಾ ಗದಾ

ಭುಜ ಮಾಧವ ಗದ ಕಂಜದರ ರವಿ ಭೂ-

ಮಿಜವಲ್ಲಭ ಗೋವಿಂದ ಮೂರುತಿಯೆಂದು॥೬॥


ಪುಂಡರೀಕದರ ರವಿಗದ ವಿಷ್ಣು ಪ್ರ-

ಚಂಡ ಶಂಖ ಕಂಜ ಗದಾ ಚಕ್ರಾ

ಅಂಡಜವಹ ಮಧುರಿಪು ಗದ ರವಿದರ

ಮಂಡಿತ ಪದ್ಮ ತ್ರಿವಿಕ್ರಮ ಮೂರುತಿ॥೭॥


ಅರಿದರ ಕಂಜ ಸುಕಂಬುವಾಮನ ಶ್ರೀ-

ಧರ ರವಿ ಗದದರ ಪದ್ಮಯುತಾ

ವರ ಚಕ್ರ ಜಲಜದರ ಗದ ಹೃಷಿಪ

ಪರ ಕಂಜ ರವಿಗದ ಶಂಖ ಪದುಮನಾಭಾ॥೮॥


ದರಗದ ರವಿಕಂಜ ದಾಮೋದರ ಸಂ-

ಕರುಷಣ ಶಂಖ ಕಂಜಾರಿ ಗದಾ

ಶರಧಿಜ ರವಿ ಪಂಕಜ ಗದ ಸಂತತ

ಧರಿಸಿಹ ಮಾಯಪ ವಾಸುದೇವನೆಂದು॥೯॥


ದರ ಸುಗದ ನಳಿನ ಅರಿ ಪ್ರದ್ಯುಮ್ನ ನು

ದುರುಳಹ ಗದ ಕಂಬು ಕಂಜಾರೀ

ಸುರಪನಿರುದ್ಧ ಕಮಲಧರ ಗದ ರವಿ

ಧರಿಸಿಹ ಸರ್ವದ ಪುರುಷೋತ್ತಮನೆಂದು॥೧೦॥


ಗದ ಕಂಬುಚರಣ ಸರಸಿಜಧೋಕ್ಷಜ

ಪದುಮ ಗದದರ ರವಿ ನರಹರೀ

ಉದಜಾರಿದರ ಗದಾಚ್ಯುತ ರವಿದರ

ಗದ ಕಮಲಾಂಕ ಜನಾರ್ದನ ವಿಭವೆಂದು॥೧೧॥


ಗದ ಚಕ್ರ ವಿಷಜ ಶಂಖ ಉಪೇಂದ್ರನು

ಸುದರುಶನ ಕಂಜ ಗದದರ ಹರೀ

ಯದುಪತಿ ಕರ ನಾಲ್ಕರೊಳು ಗದ ಕಮಲ

ಸುದರುಶನ ವಿಧುಭ ಪಾಂಚಜನ್ಯವೆಂದು॥೧೨॥


ವರ ಗಾಯತ್ರೀ ವರ್ಣ ಮೂರ್ತಿಗಳಿ-

ವರು ಸಾದರದಲಿ ಧೇನಿಪುದೂ

ನಿರುತ ಸುಕವಿಗಳ ಮತವಿದು ದಕ್ಷಿಣ

ವರ ಪ್ರಾಣೇಶವಿಠ್ಠಲ ಸಂತೈಪನೂ॥೧೩॥

****


tiLivadu sajjanarU Siri |niliya vidhige tA ||

validu sarida nuDi |tiLivadu sajjanarU ||pa||


mAdhavanippatnAlku mUrti bahu |bOdhara ukti manake tandU ||

SOdhisi krama vyutkrama padmAdi ga- |dAdi ardha sAntara kramaveMbudu||1||


kESava viShNu gOvinda vAmana krama |ISa madhuripura mAdhavanU ||

dOShaha trivikrama nArAyaNa |BAsisutiha vyutkrama mUruti endu ||2||


sankaruShaNa aniruddhanu SrIdhara |pankajanABa kaMjAdi kramA ||

binkada dAmOdara puruShOtma ka |Lanka hRuShIkapupEMdra gadAdendu ||3||


muninuta vAsudEva adhOkShaja |manasija pita narasiMha harI ||

anaGardhakrama pradyumna janA- |rdana acyuta kRuShNanu sAntarakrama||4||


nIla GanAngana ravi niBa ippa |tnAlaku mUruti lakShaNavU ||

myAlina balagai modalu keLage kaDi |kELi SanKa ravigada kanja kESava ||5||


kanjagada ravidara dhara nArAyaNa |vRujana haravidara padma gadA ||

Buja mAdhava gada kanjadhara ravi BU |mija vallaBa gOviMda mUrutiyaMdu ||6||


punDarIkadhara ravigada viShNu pra- |canDa SanKa kanja gada cakrA ||

anDajavaha madhuripu gada ravidara |manDita padma trivikrama mUruti||7||


aridara kanja su kaMbuvAmana SrI- |dhara ravi gadadhara padmayutA ||

vara cakra jalajadara gada hRuShika pa- |para kanja ravigada SanKa padumanABA ||8||


daragada ravi kanja dAmOdara san- |karuShaNa SanKa kanjAri gadA ||

Saradhija ravi pankaja gada santata |dharisiha mAyapa vAsudEvanendu||9||


dara sugada naLina ari pradyumnanu |duruLaha gada kaMbu kanjArI ||

surapaniruddha kamaladara gada ravi |dharisiha sarvada puruShOttumanendu||10||


gada kaMbucaraNa sarasijadhOkShaja |paduma gadadara ravi naraharI ||

udajAridara gadAcyuta ravidara |gada kamalAMSa janArdana viBuvendu ||11||


gada cakra viShaja SanKa upEndranu |sudaruSana kanja gadadara harI ||

yadupati kara nAlkaroLu gada kamala |sudaruSana vidhuBa pAncajanyavendu ||12||


vara gAyatrI varNa mUrtigaLi- |varu sAdaradali dhEnipudU ||

niruta sukavigaLa matavidu dakShiNa |vara prANESa viThala saMtaipanU ||13||

***