Showing posts with label ಬಾರೋ ಬಾರೋ ಭಯನಿವಾರಣ ಕೃಷ್ಣ govinda. Show all posts
Showing posts with label ಬಾರೋ ಬಾರೋ ಭಯನಿವಾರಣ ಕೃಷ್ಣ govinda. Show all posts

Thursday, 14 November 2019

ಬಾರೋ ಬಾರೋ ಭಯನಿವಾರಣ ಕೃಷ್ಣ ankita govinda

by ಗೋವಿಂದದಾಸ
ಬಾರೋ ಬಾರೋ ಭಯನಿವಾರಣ ಕೃಷ್ಣ |ಬಾರೋ ಬಾರೋ ದಯಸಾಗರನೇ ದೇವಾ ಪ

ನಳಿನೋದರ ಮೋಹನ ಕಾಮಿತರೂಪ |ನಳಿನದಳಾಯತ ನಯನ ಗೋವಳರಾಯ 1

ನಿತ್ಯಾನಂದ ನೀಲಾಂಗ ನಿರ್ಮಲಚಿತ್ತ |ಧಾತ್ರಿಜಾಂತಕವಾಸುದೇವದೇವಕಿ ಪುತ್ರ 2

ನಂದಾನಂದ ಮುಕುಂದ ಸುಂದರಕಾಯ|ಇಂದಿರೆಯರಸಗೋವಿಂದದಾಸನ ಪ್ರೀಯ3
********