..
ರಥವೇರಿ ಬರುತಿಹ ಗುರುರಾಯ ನಾ ನೋಡಮ್ಮಯ್ಯ ಪ
ಅತಿಸದ್ಭಕುತಿಲಿ ಸ್ತುತಿಸುವರಿಗೆ ಸತ್ಪಥವನೆ ತೋರುವ
ಕ್ಷಿತಿಪತಿದಾಸರೆ ಅ.ಪ
ತಿದ್ದಿಹಚ್ಚಿದ ನಾಮ ಮುದ್ರೆಗಳಿಂದಲೋಪ್ಪುತಿಹರೇ ನೋಡಮ್ಮಯ್ಯ |
ಅರ್ಥಚಂದ್ರಸಮ
ಫಣಿಯೊಳು ತಿಲಕ ಶೋಭಿಪರೇ ನೋಡಮ್ಮಯ್ಯ |
ಕ್ಷುದ್ರರ ಮುಖಕೆ ಬೀಗ ಮುದ್ರೆಯ ನೊತ್ತುತ ಸದ್ವೈಷ್ಣವರ
ನುದ್ಧರಿಸಿದ ಕರುಣೀ 1
ವರಶ್ರುತಿ ಸಮ್ಮತರಥ ನಿರ್ಮಿತವಾಗಿಹುದೇ ನೋಡಮ್ಮಯ್ಯ ||
ಸ್ಮರಪುರಹರ ಸಾರಧಿಯಾಗಿಹರೆಂದರಿತವರಿಗೆ
ಶುಭಗರೆವ ದಯಾನಿಧೇ 2
ಶಾಮಸುಂದರನ ನಾಮಸುಧಾರಸವ ನೋಡಮ್ಮಯ್ಯ
ಶ್ರೀಮಾನ್ ಮಾನವಿ ಕ್ಷೇತ್ರವೆ ತವನಿಜ
ಧಾಮವೆಂದೆನಿಸಿ ಸುಸ್ತಂಭದೊಳಿಹರೇ 3
***