Showing posts with label ತಂದೆ ಪುರಂದರದಾಸರ ಸ್ಮರಿಸುವೆ prasannavenkata purandara dasa stutih. Show all posts
Showing posts with label ತಂದೆ ಪುರಂದರದಾಸರ ಸ್ಮರಿಸುವೆ prasannavenkata purandara dasa stutih. Show all posts

Friday, 27 December 2019

ತಂದೆ ಪುರಂದರದಾಸರ ಸ್ಮರಿಸುವೆ ankita prasannavenkata purandara dasa stutih

by ಪ್ರಸನ್ನವೆಂಕಟದಾಸರು
ತಂದೆ ಪುರಂದರದಾಸರ ಸ್ಮರಿಸುವೆ ಎನ್ನಮಂದಮತಿಗಳೆದು ಹರಿಭಟನೆನಿಸುವೆ ಪ.

ಗುರುವ್ಯಾಸರಾಜರ ಚರಣಾಬ್ಜ ಷಟ್ಚರಣನವಿರತಿಭಕುತಿ ಜ್ಞಾನದಾರ್ಣವನವರಉಪನಿಷದ್ವಾರಿನಿಧಿಗೆ ತಿಮಿಂಗಿಲನಹನಧರೆಯ ಕವಿಕುಲ ಶಿಖಾಮಣಿಯೆನಿಪನ 1

ದಿನ ದಿನ ಯದೃಚ್ಛಾರ್ಥಲಾಭದಲಿ ತುಷ್ಟನಕನಕಲೋಷ್ಠ ಸಮಾನದೀಕ್ಷಿಸುವನಘನಸಿದ್ಧಿಗಳು ತಾವೆ ಬರಲೊಡಂಬಡದನಹರಿಗುಣಕೀರ್ತನೆಯಲ್ಲಿ ಪರವಶದಿಹನ2

ಭವಜಲಧಿ ಗೋಷ್ಪದಕೆ ಸರಿದಾಟಿ ಕಾಮ ಕ್ರೋಧವಮೆಟ್ಟಿ ಭಕ್ತಿಸುಧೆಯುಂಡು ತೇಗಿಭುವಿಯಲ್ಲಿ ನಿಜಕೀರ್ತಿಯನು ಹರಹಿ ಪವನಮತದವರೆನಿಪ ದಾಸರಿಗೆ ತವರೂಪ ತೋರಿದನ 3

ಕವನೋಕ್ತಿ ಮಳೆಗರೆದು ಹರಿದಾಸ ಪೈರ್ಗಳಿಗೆಅವಿರಳಾನಂದವಿತ್ತಥಿರ್üಸುವನನವಭಕುತಿ ಮನಗಂಡು ಸವೆಯದಾನಂದಪುರ ಪಥವನು ತೋರಿಸಿದಂಥ ಬಹುಕೃಪಾಕರನ 4

ಗೀತ ಠಾಯಿ ಸುಳಾದ್ಯುಗಾಭೋಗ ಪದ್ಯಪದವ್ರಾತಪ್ರಬಂಧ ರಚಿಸಿ ವಿಠಲನಪ್ರೀತಿ ಬಡಿಸಿ ಕಂಡು ನಲಿವ ವೈಷ್ಣವಾಗ್ರನಾಥ ಪ್ರಸನ್ವೆಂಕಟ ಕೃಷ್ಣಪ್ರಿಯನ 5
*********