Showing posts with label ವಿಜಯವಿಠ್ಠಲ ನಾಮ ಭಜಿಸಿದಾ ಮಾನವಗೆ vijaya vittala. Show all posts
Showing posts with label ವಿಜಯವಿಠ್ಠಲ ನಾಮ ಭಜಿಸಿದಾ ಮಾನವಗೆ vijaya vittala. Show all posts

Wednesday, 16 October 2019

ವಿಜಯವಿಠ್ಠಲ ನಾಮ ಭಜಿಸಿದಾ ಮಾನವಗೆ ankita vijaya vittala

ವಿಜಯದಾಸ
ವಿಜಯವಿಠ್ಠಲ ನಾಮ
ಭಜಿಸಿದಾ ಮಾನವಗೆ ಸತತ ಸಂಪದವಕ್ಕು ಪ

ಕಾಯ ಶುಚಿಯಾಗುವದು ಕಠಿನತನ ಪೋಗುವದು
ಆಯು ಹೆಚ್ಚುವುದು ನಿಯೋಗಿ ಯಾಹಾ
ನಾಯಿ ಮೊದಲಾದ ಪ್ರಾರಬ್ಧ ಜನುಮಗಳಿರಲು
ಬಾಯಿಲಿಂದಾಕ್ಷಣ ತೀರಿ ಪೋಪವು ಕೇಳಿ 1

ದ್ವೇಷಿಗಳು ಎಲ್ಲ ಬಾಂಧವರಾಗಿ ಇಪ್ಪರು
ದ್ವೇಷ ಪುಟ್ಟದು ತನಗೇತರ ಮೇಲೆ
ದೇಶ ಮಧ್ಯದಲಿ ತಾನೆ ಎಲ್ಲಿ ಇದ್ದರೂ
ಕೋಶಾಧಿಪತಿಯಾಗಿ ಸಂಚರಿಸುತಿಪ್ಪರು2

ಹೀನ ವಿಷಯಂಗಳಿಗೆ ಅವನ ಮನವೆರಗಿದರೆ
ಕಾಣಿಸುವನು ತಾನೆ ಮುಂದೊಲಿದು
ಏನು ಹೇಳಲಿ ಹರಿಯ ಅನುಕಂಪನಾತನಕೆ
ಕಾಲ ಕಡೆಗಾಣನು 3

ದೇವಾದಿ ಮುನಿತತಿಯ ಮೊದಲಾದವರು ನೆನೆದು
ಆವಾವ ಸೌಖ್ಯದಲಿ ಇಪ್ಪರದಕೋ
ಭಾವದಲಿ ತಿಳಿದು ಭಕುತಿಯ ಮಾಡಿರೋ ಜನರು
ಕಾವುತಲಿಪ್ಪ ಸರ್ವಾಶ್ರಯನಾಗಿ ಹರಿ4

ಕಂಡವಗೆ ದೊರಕದು ಈ ನಾಮ ಜಪಿಸಿದರು
ಕಂಡವಗೆ ಬಲು ಸುಲಭ ಭಯವೆಯಿಲ್ಲಾ
ಮಂಡಲವ ಚರಿಸಿ ನಾನಾ ವ್ರತ ಮಾಡದಿರಿ
ಕೊಂಡಾಡು ವಿಜಯವಿಠ್ಠಲನ ಆಸರ ಸೇರಿ5
********