ಜಗದಾದಿವಂದ್ಯನಿಗೆ ಶರಣು ಪ
ಶರಣಜಗದೊಡೆಯ ಶರಣು
ಪನ್ನಗಾನಗದೊಡೆಯ ಶರಣು 1
ಖಗಪ ನಖಾಗ್ರದಲಿ ಮಿಗೆ ಶೋಭಿಸುವ
ತವಪದನಖಾಗ್ರಕೆ ಶರಣು2
ಮೂಡಲಾಗಿರಿಗೆ ಶರಣು
ಗಿರಿಯ ಅಡಿದಾವರೆಗಳಿಗೆ ಶರಣು3
ದೃಢಮನದಿ ನಿನ್ನ ಅಡಿದರುಶನಕೆ
ನಡೆರ್ವಡಿಗಳಿಗೆ ಶರಣು4
ಮೆಟ್ಟು ಮೆಟ್ಟಲಿಗೆ ಶರಣು
ಮನಮುಟ್ಟ ಮೆಟ್ಟಲೇರುತಿಹ
ನಿನ್ನಿಷ್ಟ ಭಕ್ತರಿಗೆ ಶರಣು 5
ತನುಕಷ್ಟ ಹರಿಸಿ ಮನತುಷ್ಟಿಯನು ತೋರ್ವ
ಬೆಟ್ಟದಂದಕ್ಕೆಲ್ಲ ಶರಣು 6
ಸುರಕಿನ್ನರರ ತರುಶಿಲಾಲತಾಕಾರ ತವ
ಪರಿವಾರಕ್ಕೆಲ್ಲ ಶರಣು7
ಶುಕಪಿಕನಾದಝೇಂಕಾರ
ಸ್ವರಶಬ್ದವಾಚ್ಯತವ ಶರಣು 8
ಮೆಲ್ಲಮೆಲ್ಲನೆ ಭಕ್ತರುಲ್ಲಾಸವನೇ ತೋರ್ವ
ಚೆಲ್ವ ಗಾಳಿಗೋಪುರ ದ್ವಾರಕ್ಕೆ ಶರಣು 9
ಲೀಲೆಯಿಂದಲಿ ನಿನ್ನನೋಲೈಪ
ಭಕ್ತರ ಪಾದಪಲ್ಲವಂಗಳಿಗೆ ಶರಣು 10
ಗೋವಿಂದ ಸಚ್ಚಿದಾನಂದ ಮುಕುಂದನೆಂದು-
ಚ್ಚರಿಪ ಭಕ್ತರಿಗೆ ಶರಣು11
ಹರಿ ಹರೀ ಹರಿ ಎಂದು ಹರಿದಾರಿ ಪಿಡಿದ
ವರ ಅಡಿದಾವರೆಗಳಿಗೆ ಶರಣು 12
ಪರಿಪರಿ ಭಾಧೆಯಿಂ ತರಳನ್ನ ಕಾಯ್ದ ಶ್ರೀ
ನರಹರಿಯ ಚರಣಾರವಿಂದಕ್ಕೆ ಶರಣು 13
ತಿರುತಿರುಗಿ ತುರುವನು ಕರುವು ಅರಸುವಂತೆ
ತಿರುದಾರಿ ಮೊಣಕಾಲ ಮುರಿಗೆ ಶರಣು 14
ಭಕ್ತರಾಪತ್ತಳಿವ ಶಕ್ತಿಸಂಪತ್ತೀವ ಉತ್ತಮೋತ್ತಮ
ಭಕ್ತರಾ ಮಂಟಪಕ್ಕೆ ಶರಣು 15
ಭಕ್ತಿಯಿಂದಲಿ ಸಪ್ತಗಿರಿಯ ದಾಟಿದ ಹರಿ-
ಭಕ್ತಜನಸಂದೋಹಗಳಿಗೆ ಶರಣು 16
ಶಕ್ತಿರಹಿತರಾಗಿ ರಿಕ್ತಹಸ್ತದಿ ಬಂದ
ಭಕ್ತರುಧ್ಧರಿಸಲು ನಿಂದ ಸಮೀರನಿಗೆ ಶರಣು17
ಜೀವರಿವರೆನ್ನುವರು ದರುಶನವನೀಯೆಂದು ಕ-
ರವ ಮುಗಿದು ಹರಿಯ ಸ್ತುತಿಸುವಗೆ ಶರಣು 18
ಪಾವನಾ ಮೂರ್ತಿಯನು ಮಾನಸದಿ ಧೇನಿಸಲು
ಭಾವಶುಧ್ದಿಯನೀವ ಜೀವೇಶನಿಗೆ ಶರಣು 19
ಸಚ್ಚಿದಾನಂದಾತ್ಮ ಶ್ರೀ ಮುಕುಂದನ ದಿವ್ಯ
ಅರಮನೆಯ ಮಹಾದ್ವಾರಕ್ಕೆ ಶರಣು 20
ಅಚ್ಯುತನ ರಾಣಿ ಸಿರಿ ಮೆಚ್ಚಿ ತÀುತಿಸುವ
ಅವ್ಯಾಕೃತಾಕಾಶಾವರಣಕ್ಕೆ ಶರಣು 21
ತೀರ್ಥಮಹಿಮೋಪೇತ ಸ್ವಾಮಿಪುಷ್ಕರಣೀ-
ತಟವಿರಾಜಿತ ಅಶ್ವತ್ಥವೃಕ್ಷರಾಜನಿಗೆ ಶರಣು22
ಭೂದೇವಿಯಾರಮಣ ಆದಿಭೂವರಹ
ಮೂರ್ತಿಯ ಶ್ರೀಪಾದಯುಗ್ಮಕ್ಕೆ ಶರಣು 23
ಬ್ರಹ್ಮಾಂಡದೊಡೆಯನ ದಿವ್ಯ ನಿಲಯದೊಳಿರುವ
ಬಹಿರಾವರಣಕ್ಕೆ ಶರಣು 24
ಸರ್ವಗುಣಸಂಪೂರ್ಣ ವೈಕುಂಠಮಂದಿರನ
ಸ್ವರ್ಣಮಯ ಸುಪರ್ಣಸ್ಥಂಭಕ್ಕೆ ಶರಣು 25
ಸ್ವಾಮಿ ಸಂದರ್ಶನಕ್ಕೆ ಗಮನ ನಿರ್ಗಮನವುಳ್ಳ
ಸುಮನಸರ ಭಕ್ತಜನಸಂಘಕ್ಕೆ ಶರಣು26
ಅಂತರಾವರಣಕ್ಕೆ ಶರಣು 27
ಕಾಂಚನರೂಪ ಸುವರ್ಣಮುಖರೀನದಿ ವಿ-
ರಾಜಿತ ತೊಟ್ಟಿತೀರ್ಥ ಸಮಸ್ತ ತೀರ್ಥಗಳಿಗೆ ಶರಣು 28
ಸುಮನಸರು ಹೃನ್ಮನದಿ ಧೇನಿಸುವ ಕಾಂಚನ
ವಿಮಾನದಲಿ ಬೆಳಗುತಿಹ ಶ್ರೀ ಶ್ರೀನಿವಾಸನಿಗೆ ಶರಣು 29
ಬಗೆ ಬಗೆ ಭಕ್ತರಪರಾಧಗಳ ಹರಿಸೆ
ಭೂಗಿರಿಯ ಸೇರಿದ ಶ್ರೀಹರಿಗೆ ಶರಣು 30
ವಾರಿಯೊಳಗ್ಯೋಲಾಡಿ ಶ್ರೀಶೈಲದೊಳು ನಿಂ-
ತ ಶ್ರೀಲೋ¯ನಾಗಿರ್ಪಗೆ ಶರಣು31
ಬೆಟ್ಟ ಬೆನ್ನಲಿ ಹೊತ್ತು ಮೆಟ್ಟಿ ಈ ಗಿರಿಯನ್ನು
ಶೇಷ್ಠನೆನಿಸಿದ ದಿಟ್ಟ ಮೂರುತಿಗೆ ಶರಣು 32
ಧರೆಯ ಕೆದರೀ ಬಂದು ಗಿರಿಯ ವರಹನ ಬೇಡಿ
ಮರುಳುಮಾಡಿದ ಮಾಯಾರಮಣನಿಗೆ ಶರಣು 33
ತರಳರೂಪವ ಕೆಡಿಸಿ ಗಿರಿಯ ಹುದರಯೊಳಡಗಿ
ಸುರಜೇಷ್ಠನೆಂದೀಗ ಪೂಜೆ ಗೊಂಬುವಗೆ ಶರಣು 34
ವಟಪತ್ರಶಾಯಿ ನೀ ವಟುವಾಗಿ ಬೇಡಿ ಭ-
ವಾಟವಿಯ ದಾಟಿಸಲು ನಿಂದವಗೆ ಶರಣು 35
ಪೆತ್ತಮಾತೆಯ ಹರಿಸಿ ಮೆತ್ತನಿಲ್ಲಿಗೆ ಬಂದು
ಉತ್ತಮಾಗತಿಪ್ರದ ಸರ್ವೋತ್ತಮಗೆ ಶರಣು 36
ಕ್ಷಿತಿಸುತೆಯ ಮಾತನು ಹಿತದಿ ಪಾಲಿಸೆ ವೇದ-
ವತಿಯ ಪತಿಯಾಗಿ ನಿಂದವಗೆ ಶರಣು 37
ಗುಟ್ಟಾಗಿ ಪಾಲ್ಕುಡಿದು ಪೆಟ್ಟಿನಾ ನೆಪದಲ್ಲಿ
ದೃಷ್ಟಿಗೋಚರನಾದ ಬೆಟ್ಟದೊಡೆಯನಿಗೆ ಶರಣು38
ಉತ್ತಮಾಸ್ತ್ರೀಯರಿಗೆ ನಾಚಿ ಬತ್ತಲೆಯಾಗಿ
ಹುತ್ತದೊಳು ಅಡಗಿಯೆ ಮೆರೆದವಗೆ ಶರಣು 39
ಸಿರಿಯ ಹಯವನು ಮಾಡಿ ಚರಿಸಿ
ಗಿರಿಯೊಳುಹಯವ ಅರಸಿಯಿಂದ
ಹರಿಸಿಕೊಂಡವನಿಗೆ ಶರಣು 40
ಹಿರಣ್ಯಗರ್ಭನ ಜನಕ ಸನ್ಮಹಿಯ ಸನ್ನಿಧಿಯ
ಕನಕಮಯಕವಾಟಕ್ಕೆ ಶರಣು 41
ತಟಿಕ್ಕೋಟಿನಿಭ ಪೂರ್ಣ ಸಂಪೂರ್ಣ ಲಕ್ಷಣ
ಸನ್ಮಾಂಗಳಾ ಸುಂದರ ಮೂರ್ತೇ ತವ ಶರಣು42
ಪ್ರಹ್ಲಾದ ನಾರದ ವಸುಋಷಿಗಂಧರ್ವಾದಿ
ಮುಕ್ತಾಮುಕ್ತಗಣ ವಂದಿತಾ ತವ ಶರಣು43
ನಂದಸುನಂದನ ಜಯವಿಜಯಾದಿ ಪಾ-
ರ್ಷದಯುಕ್ತ ಶ್ರೀ ವಿರಿಂಚಿಶೇಷಶಕ್ತ್ಯಾದಿ
ಸಂಸೇವ್ಯಮಾನ ತವ ಶರಣು44
ಸರ್ವಾಂಗುಳ್ಳಂಗುಷ್ಠದಳ ವಿಲಸಿತ ಸತ್ ಪಾದ-
ಪಂಕಜ ಧ್ವಜ ವಜ್ರಾಂಕುಶಾದಿ ಸುಚಿಹ್ನ ಚಿಹ್ನಿತ ತವ ಶರಣು 45
ಚಾರು ಜಾನುಯುಗ ಜಂಘೆಯುಗಳ ಸಂಯುಕ್ತ ತುಂಗ
ಗುಲ್ಫಾರುಣನಖ ಧೃತಾ ದೀಧಿತಿಯುಕ್ತ ತವ ಶರಣು 46
ಕಂಬುಕಂಠ ನಿಮ್ನನಾಭಿವಳಿ ಮತ್ಪÀಲ್ಲವೋದರ
ಬೃಹತ್ ಕಟಿತಟಶ್ರೋಣಿ ಕರಭೋರು ದ್ವಯಾನಿಶ್ರ ತವ ಶರಣು 47
ವಿಭ್ರಾಜಮಾನ ಶ್ರೀವತ್ಸ ವಕ್ಷಕೌಸ್ತುಭ
ವೈಜಯಂತಿ ವನಮಾಲ ತವ ಶರಣು 48
ಪ್ರಲಯ ಪೀವರಭುಜ ತುಂಗಂಶೋರಸ್ಥ
ಲಾಶ್ರಯ ತವ ಶರಣು 49
ಅನಘ್ರ್ಯರತ್ನ ಮೌಕ್ತಿಕವ್ರಾತ ಕಿರೀಟ ಕಟಕಾಂಗದ
ಕಟಿಸೂತ್ರ ಬ್ರಹ್ಮಸೂತ್ರ ಹಾರ ನೂಪುರ ಕುಂಡಲಾ
ನ್ವಿತ ತವ ಶರಣು50
ಚಾರುಪ್ರಸನ್ನವದನ ಮಂದಹಾಸ ನಿರೀಕ್ಷಣ ಸು-
ಭದ್ರನಾಸ ಚಾರುಸುಕರ್ಣ ಸುಕಪೋಲಅರುಣ ತವ ಶರಣು 51
ಸಹಸ್ರ ಫÀಣಶಿರೋಮಣಿಪ್ರಭಾನ್ವಿತ ಶೇಷಶೈಲಸ್ಥ
ಘನಶ್ಯಾಮ ಪೀತಕೌಶೇಯವಾಸ ಶ್ರೀಪರಮಪುರುಷ
ಶಾಂತ ಪದ್ಮಪತ್ರಾಯತೇಕ್ಷಣ ತವ ಶರಣು 52
ಅನಂತವೇದೋಕ್ತ ಮಹಿಮೋಪೇತ ಸರ್ವಸ್ವರವರ್ಣ
ಸರ್ವಶಬ್ದವಾಚ್ಯ ಪ್ರತಿಪಾದ್ಯ ಶರಣು 53
ಸಚ್ಚಿದಾನಂದಾತ್ಮ ಸರ್ವಸುಗುಣೋಪೇತ ಸರ್ವ
ಹೃತ್ಕಮಲಸ್ಥಿತ ತವ ಶರಣು 54
ಅಣುತ್ರ್ಯಣು ತೃಟಿಲವ ಕ್ಷಣಾದಿಕಾಲ ಮಹ-
ತ್ಕಾಲಾತ್ಮಕ ನಿತ್ಯನಿರ್ಮಲಮೂರ್ತೇ ತವ ಶರಣು 55
ಸೃಷ್ಟ್ಯಾದ್ಯಷ್ಟ ಕರ್ತೃಕ ಶಿಷ್ಟ ಶ್ರೀ ಪರ
ಮೇಷ್ಟಿವಂದಿತ ತವ ಶರಣು 56
ವಿಶ್ವ ತೈಜಸ ಪ್ರಾಜ್ಞ ತುರ್ಯಾ
ದ್ಯಷ್ಟರೂಪಾತ್ಮಕ ತವ ಶರಣು57
ಭಯಕೃತ್ ಭಯಹಾರಿ ಭಕ್ತಜನಕಾಧಾರಿ
ಕಂಸಾರಿ ಮುರಾರಿ ಶ್ರೀಹರಿಯೆ ಶರಣು58
ಭವರೋಗಭೇಷಜ ಭಕ್ತಜನಬಂಧೋ
ಮುಚುಕುಂದವರದ ಗೋವಿಂದ ಶರಣು 59
ಮುಕ್ತಾಮುಕ್ತಾಶ್ರಯ ಭಕ್ತಜನಸಂರಕ್ಷಣಾ
ವ್ಯಕ್ತಾವ್ಯಕ್ತ ಮಹಿಮ ತವ ಶರಣು 60
ವ್ಯಾಪ್ತ ಜಗದಾದ್ಯಂತ ನಿರ್ಲಿಪ್ತ
ತತ್ತದಾಕಾರ ಜಗದಾಪ್ತ ಶರಣು 61
ಚೇತನಾಚೇತನ ವಿಲಕ್ಷಣ ಸ್ವಗತಭೇದವಿವ-
ರ್ಜಿತ ಪತಿತಪಾವನಮೂರ್ತೇ ತವ ಶರಣು 62
ಕ್ಷರಾಕ್ಷರ ಪರುಷಪೂಜಿತ ಪಾದ
ಪುರಾಣಪುರುಷೋತ್ತಮನೆ ಶರಣು 63
ರವಿಕೋಟಿಕಿರಣ ರತ್ನಕನಕಮಯ ಮುಕು-
ಟಾನ್ವಿತ ತವಶಿರಸ್ಸಿಗೇ ತವ ಶರಣು 64
ಇಂದುಮಂಡಲಭಾಸ ಮಂದಸ್ಮಿತ
ಸುಂದರಾನಂದ ಆನನಕೆ ಶರಣು 65
ಲೋಲ ವಿಶಾಲಫಾಲ ಕಸ್ತೂರೀತಿಲಕಾಂಕಿತ
ಶ್ರೀಲೋಲ ಶರಣು 66
ಪೂವಿಲ್ಲನಾ ಬಿಲ್ಲ ಪೋಲ್ವ ಹುಬ್ಬು ಕಂಜ -
ದಳದೋಲ್ ಚಂಪಕಾಮುಗುಳಿಗೆಣೆನಾಸಿಕಕೆ ಶರಣು 67
ಕನಕ ರತುನಮಣೀಖಚಿತ ಮಕರ
ಕರ್ಣಕುಂಡಲಾನ್ವಿತ ತವ ಕರ್ಣಕ್ಕೆ ಶರಣು 68
ಅಕುಟಿಲರ ನಿಷ್ಕಂಟಕ ಶ್ರೀ ವೇಂಕಟೇಶಾ ನಿನ್ನ
ಶ್ರೀಕಂಠದ ಕೌಸ್ತುಭಾಭರಣಯುಕ್ತ ಕಂಠಕ್ಕೆ ಶರಣು
****