Showing posts with label ಎಲ್ಲ ಶಾಸ್ತ್ರದ ಸಾರದ ತಿಳಲ್ಮನದಲ್ಲಿ ಹರಿಯನು ಕಾಂಬುದಕೆ gopalakrishna vittala. Show all posts
Showing posts with label ಎಲ್ಲ ಶಾಸ್ತ್ರದ ಸಾರದ ತಿಳಲ್ಮನದಲ್ಲಿ ಹರಿಯನು ಕಾಂಬುದಕೆ gopalakrishna vittala. Show all posts

Sunday, 1 August 2021

ಎಲ್ಲ ಶಾಸ್ತ್ರದ ಸಾರದ ತಿಳಲ್ಮನದಲ್ಲಿ ಹರಿಯನು ಕಾಂಬುದಕೆ ankita gopalakrishna vittala

ಎಲ್ಲಾ ಶಾಸ್ತ್ರದ ಸಾರದ ತಿಳಲ್ಮನ

ದಲ್ಲಿ ಹರಿಯನು ಕಾಂಬುದಕೆ ಪ.


ಮನದಲಿ ಹರಿಯನು ಕಾಂಬುವ ಸೊಬಗು

ಬಲ್ಲಿದ ವೈಕುಂಠಕೋಡ್ವದಕೆ ಅ.ಪ.


ವಿಧಿನೀಷೇಧಗಳಾಚರಿಸುವುದು

ವಿಧ ವಿಧ ಜೀವರ ಸಾಧನಕೆ

ವಿಧ ವಿಧ ಸಾಧನ ನಂತರ ತಿಳಿವುದು

ವಿಧಿ ಜನಕನ ಪದಪಿಡಿವುದಕೆ 1

ಸ್ನಾನಜಪಾಹ್ನೀಕಗಳೆಲ್ಲವು ತನ್ನ

ಧ್ಯಾನಕೆ ಶ್ರೀಹರಿ ನಿಲ್ವುದಕೆ

ಧ್ಯಾನಕೆ ಶ್ರೀಹರಿ ನಿಂತ ಮೇಲೆ ಸು

e್ಞÁನದಿಂದ ತನ್ನರಿವುದಕೆ 2

ನೆಲೆ ಇಲ್ಲದ ಕರ್ಮಾಳಿಗಳ್ ದೇಹದ

ಮಲಿನ ತೊಳೆದು ಶುದ್ಧಿಗೈವುದಕೆ

ಮಲಿನ ತೊಳೆದು ಮನಶುದ್ಧದಿ ಹೃದಯದಿ

ಇಳೆಯರಸನ ನೆಲೆ ಅರಿವುದಕೆ 3

ಅಗ್ನಿ ಹೋತ್ರಯe್ಞÁದಿ ಕಾರ್ಯಗಳ್

ಶೀಘ್ರದಿ ಹರಿಯನು ಕಾಂಬುದಕೆ

ಶೀಘ್ರದಿ ಹರಿಯನು ಕಂಡ ಮ್ಯಾಲೆ ಇವು

ಅಗ್ರಜವಲ್ಲೆಂದರಿವುದಕೆ 4

ರಂಗನ ಮೂರ್ತಿಯನಿಟ್ಟು ಪೂಜಿಸುವುದು

ಅಂಗÀದಲ್ಲಿ ತಾನು ಕಾಂಬುದಕೆ

ಅಂಗದಲ್ಲಿ ತಾನು ಕಂಡ ಮೇಲೆ ಇವು

ಅಂಗಡಿ ಎಂತೆಂದರಿವುದಕೆ 5

ನಿತ್ಯ ನೈಮಿತ್ತಿಕ ಕರ್ಮಗಳೆಲ್ಲವು

ಚಿತ್ತದಿ ಹರಿಯನು ತೋರ್ಪುದಕೆ

ಚಿತ್ತದಿ ಹರಿಯನು ಕಂಡ ಮೇಲೆ ಇವು

ಮತ್ರ್ಯರಿಗೆಸಗಿ ಮೌನಾಗ್ವುದಕೆ 6

ಚಾಂದ್ರಾಯಣ ವ್ರತ ಉಪವಾಸಗಳು

ಇಂದ್ರಿಯ ನಿಗ್ರಹ ಮಾಡ್ವದಕೆ

ಇಂದ್ರಿಯ ಚಲಿಸದೆ ಮನ ಧೃಡವಾಗಲು

ಹಿಂದಿನ ಹಂಬಲ ತ್ಯಜಿಪುದಕೆ 7

ಮಧ್ವಶಾಸ್ತ್ರದ ಸಾರತತ್ವ ಮನ

ಶುದ್ಧಿಯಗೈಸುತ ಸುಖಿಪುದಕೆ

ಶುದ್ಧರಾದ ಶ್ರೀ ಗುರು ಕರುಣವು ಅನಿ-

ರುದ್ಧನ ಹೃದಯದಿ ತೋರ್ವದಕೆ 8

ನೇಮದಿ ದ್ವಾದಶ ನಾಮಧಾರಣೆ ಹರಿ

ನಾಮದ ದೇಹ ಬೆಳಗ್ವದಕೆ

ಕಾಮಕ್ರೋಧವ ಬಿಡುವುದು ವಳಗಿನ

ಶ್ರೀ ಮನೋಹರನನು ಕಾಂಬುದಕೆ 9

ಹೊರಗಿನ ವಸ್ತು ದೃಷ್ಟಿಸುವುದು ಶ್ರೀ ಹರಿ

ವರ ವಿಶ್ವರೂಪವ ತಿಳಿವುದಕೆ

ವರ ವಿಶ್ವರೂಪಧ್ಯಾನದಿಂದ ತನ್ನ

ವರ ಬಿಂಬನ ಕಂಡು ನಲಿವುದಕೆ 10

ಅರಗಣ್ಣ ಮುಚ್ಚುವ ಅಭ್ಯಾಸಗಳೆಲ್ಲ

ಸ್ಥಿರಮನವಾಗುವ ಕಾರಣಕೆ

ಸ್ಥಿರಮನ ಶ್ರೀ ಹರಿ ದಯ ಮಾಡಲು ನೇತ್ರ

ತೆರೆಯದೆ ಬಿಂಬನ ಕಾಂಬುದಕೆ 11

ಶಾಸ್ತ್ರದಿ ಪೇಳುವ ಧ್ಯಾನ ಪ್ರಕರಣವು

ಶ್ರೋತ್ರದಿ ಕೇಳುತ ತಿಳಿವುದಕೆ

ಗಾತ್ರದಿ ಶ್ರೀ ಗುರು ಕೃಪೆ ಮಾಡಲು ವಳ

ನೇತ್ರದಿ ಸರ್ವವು ಕಾಂಬುದಕೆ 12

ಪಕ್ಷಮಾಸ ವ್ರತ ಪಾರಾಯಣ ಅಪ-

ರೋಕ್ಷ ಪುಟ್ಟಲು ದಾರಿ ತೋರ್ವದಕೆ

ಶಿಕ್ಷ ರಕ್ಷಕರಾದ ಗುರುಕರುಣವು ಅಪ-

ರೋಕ್ಷ ಪುಟ್ಟಿಸಿ ನಿಜವರಿವುದಕೆ13

ಪರಿ ಪರಿ ಜನರನು ಸೇವಿಸುವುದು ತನ್ನ

ಪರಮಾರ್ಥತೆ ದೂರಾಗ್ವದಕೆ

ಗುರುಚರಣವ ಸೇವಿಸುವುದು ಶ್ರೀ ಹರಿ

ಅರಘಳಿಗಗಲದೆ ಪೊರೆವುದಕೆ 14

ಡಾಂಭಿಕ ಸಾಧನವೆಲ್ಲವು ಶ್ರೀ ಹರಿ

ಡಿಂಬದೊಳಗೆ ಮರೆಯಾಗ್ವದಕೆ

ನಂಬಿ ಶ್ರೀ ಹರಿ ಗುರು ಚರಣವ ಪೊಗಳ್ಪದು

ಡಿಂಬದೊಳಗೆ ಹರಿ ಕಾಂಬುದಕೆ15

ಕಷ್ಟದ ಕರ್ಮ ವೈರಾಗ್ಯಗಳೆಲ್ಲವು

ಪುಟ್ಟಿಸಲೂ ಭಕ್ತಿ e್ಞÁನಕ್ಕೆ

ಪುಟ್ಟಲು ಭಕ್ತಿ e್ಞÁನ ಪಾಂಡುರಂಗ

ವಿಠ್ಠಲನೊಬ್ಬನ ಪಿಡಿವುದಕೆ 16

ಯಾತ್ರೆ ತೀರ್ಥ ಚರಿಪುದು ಶ್ರೀ ಹರಿ ತನ್ನ

ಗಾತ್ರದಲ್ಲಿರುವನೆಂದರಿವುದಕೆ

ಗಾತ್ರವೆ ಕ್ಷೇತ್ರವೆಂದರಿತ ಮೇಲೆ ಸ

ರ್ವತ್ರದಿ ವಿಠಲನ ಕಾಂಬುದಕೆ17

ಎಂತೆಂತೋ ಮಾರ್ಗಗಳರಸುವುದು

ಚಿಂತನೆಗೆ ಹರಿ ನಿಲ್ವುದಕೆ

ಚಿಂತನೆಗೆ ಹರಿ ನಿಂತ ಮೇಲೆ ತಾನು

ಶಾಂತನಾಗಿ ಜಡನಾಗ್ವದಕೆ 18

ಹೊರಗಿನ ಸಂಸ್ಕಾರಗಳೆಲ್ಲವು ತನ್ನ

ವಳಗಿನ ಸಂಸ್ಕಾರ ತೆರೆವುದಕೆ

ವಳಗಿನ ಸಂಸ್ಕಾರ ತೆರೆದಮ್ಯಾಲೆ ತನ್ನ

ಇರವರಿತು ಸುಖ ಸುರಿವುದಕೆ19

ಸಾಸಿರ ಜನ್ಮದ ಸಾಧನಗಳು ಹರಿ

ದಾಸನಾಗಿ ತಾನು ಮೆರೆವುದಕೆ

ದಾಸನಾದ ಮೇಲೆ ಕ್ಲೇಶಕೆ ಸಿಲುಕದೆ

ಶ್ರೀಶನ ಹೃದಯದಿ ಕಾಂಬುದಕೆ 20

ಸಾರತತ್ವವನು ಅರಿವುದು ಗುರು ಮಧ್ವ-

ಚಾರ್ಯರ ಮಾರ್ಗವ ಪಿಡಿವುದಕೆ

ಪ್ರೇರಕ ಗೋಪಾಲಕೃಷ್ಣವಿಠಲ ಮನ

ಸೇರಲು ಕಂಡು ತಾ ನಲಿವುದಕೆ 21

****