raga-
ಇಂದು ನಿಮ್ಮ ಹರಿವಾಣ ಪ್ರಸಾದವುಂಟೆನಲಾಗಿ||
ಬಂದೆವಯ್ಯ ಗೋವಿಂದ ಶೆಟ್ಟಿ ||
ಅಪ್ಪಾಲು ಅತಿರಸ ತುಪ್ಪ ಕಜ್ಜಾಯವು ಒಪ್ಪುವ ಯಾಲಕ್ಕಿ ಶುಂಠಿ ಮೆಣಸು
ಅಪರೂಪವಾದ ಕಜ್ಜಾಯ ರಾಶಿಗಳ ಛಪ್ಪನ್ನದೇಶಕ್ಕೆ ಮಾರುವ ಶೆಟ್ಟಿ ||ಬಂದೆವಯ್ಯ ಗೋವಿಂದಶೆಟ್ಟಿ||
ಒಡೆದ ಮಡಕೆಯೆನ್ನು ಬಿಡದೆ ನಾಮವ ಮಾಡಿಕೊಡುವೆ ನೀ ಕಾಸಿಗೆ ಒಂದೊಂದನು
ಒಡಲು ತುಂಬಿ ಮಿಕ್ಕ ಅನ್ನವ ಮಾರಿಸಿ ಒಡವೆಯ ಗಳಿಸುವ ಕಡುಲೋಭಿ ಶೆಟ್ಟಿ ||
ಬಂದೆವಯ್ಯ ಗೋವಿಂದಶೆಟ್ಟಿ||
ಶೇಷಗಿರಿಯಮೇಲೆ ಇಪ್ಪ ತಿಮ್ಮಶೆಟ್ಟಿ ದೇಶಕೆ ಪ್ರಸಾದವ ನಡೆಸುವ ಶೆಟ್ಟಿ
ಆಶೆಯಿಂದ ಹಣಕಾಸು ಗಳಿಸುವ ಆದಿಕೇಶವ ನಾರಾಯಣನೆಂಬ ಶೆಟ್ಟಿ ||
ಬಂದೆವಯ್ಯ ಗೋವಿಂದಶೆಟ್ಟಿ ||
***
Bandevaya govinda setti,
Nimma harivana tirtha prasada untenalagi||
Appavu athirasa tuppa cinni palu,
Oppuva sakkare Alakkiyu,
Aparupavada kajjaya rasigala,
Soppanna desakke maruva setti||1||
Odeda madakeyalli aredu namava madi,
Koduveni kasige ondondanu.
Odalu tumbimikka ogara marisi,
Odeveya galisuva kadu lobi setti||2||
Sesagiriyalli vasa madi kondu,
Desakke prasada nadesuva setti,
Ase madi hana-kasu galipa,
Adikesava narayana timmappa setti||3||
***
pallavi
bandEvAya gOvinda setti nimma harivana tIrtha prasAda untenalagi
caraNam 1
appavu athirasa tuppa cinni palu oppuva sakkare Alakkiyu
aparUpavada kajjaya rasigaLa soppanna dEshakke maruva setti
caraNam 2
oDeda maDakeyalli aredu nAmava mADi koDuveni kAsige ondondanu
oDalu tumbimikka ogara marisi ODeveya galisuva kaDu lObhi setti
caraNam 3
shESagiriyalli vAsa mADi koNDu dEsakke prasAda naDesuva setti
Ase mADi hana-kAsu galipa Adikesava nArayaNa timmappa setti
***
ಬಂದೇವಯ್ಯಾ ಗೋವಿಂದ ಶೆಟ್ಟಿ
ನಿಮ್ಮ ಹರಿವಾಣ ತೀರ್ಥ ಪ್ರಸಾದ ಉಂಟೆನಲಾಗಿ ||ಪಲ್ಲವಿ||
ಅಪ್ಪವು ಅತಿರಸ ತುಪ್ಪವು ಬಿಸಿ ಹಾಲು
ಒಪ್ಪುವ ಸಕ್ಕರೆ ಯಾಲಕ್ಕಿಯು
ಅಪರೂಪವಾದ ಕಜ್ಜಾಯಗಳನೆಲ್ಲ
ಛಪ್ಪನ್ನ ದೇಶಕ್ಕೆ ಮಾರುವ ಶೆಟ್ಟಿ ||೧||
ಒಡೆದ ಮಡಕೆ ತಂದು ಅರೆದು ನಾಮವ ಮಾಡಿ
ಕೊಡುವೆ ನೀ ಕಾಸಿಗೆ ಒಂದೊಂದಾಗಿ
ಒಡಲು ತುಂಬಿ ಮಿಕ್ಕ ಅನ್ನವ ಮಾರಿಸಿ
ಒಡವೆಯ ಗಳಿಸುವ ಕಡುಲೋಭಿ ಶೆಟ್ಟಿ ||೨||
ಶೇಷಗಿರಿಯಲಿ ವಾಸವಾಗಿಹ ಶೆಟ್ಟಿ
ದೇಶದೇಶದೊಳು ಹೆಸರಾದ ಶೆಟ್ಟಿ
ಕಾಸು ಕಾಸಿಗೆ ಬಡ್ಡಿ ಗಳಿಸಿಕೊಂಬ
ಆದಿಕೇಶವ ನಾರಾಯಣ ತಿಮ್ಮ ಶೆಟ್ಟಿ ||೩||
*********