Showing posts with label ರಥವಾನೇರಿದ ಯತಿವರನ್ಯಾರೇ ಪೇಳಮ್ಮಯ್ಯಾ gurujagannatha vittala. Show all posts
Showing posts with label ರಥವಾನೇರಿದ ಯತಿವರನ್ಯಾರೇ ಪೇಳಮ್ಮಯ್ಯಾ gurujagannatha vittala. Show all posts

Friday, 27 December 2019

ರಥವಾನೇರಿದ ಯತಿವರನ್ಯಾರೇ ಪೇಳಮ್ಮಯ್ಯಾ ankita gurujagannatha vittala

by ಗುರುಜಗನ್ನಾಥದಾಸರು
ರಥವಾನೇರಿದ ಯತಿವರನ್ಯಾರೇ ಪೇಳಮ್ಮಯ್ಯಾ ಪ

ವಿತತ ಮಹಿಮಾ - ನತಜನರನತಿಹಿತದಿ ಪಾಲಿಸುವ - ಅತುಲ ಮಹಿಮ ಕಾಣಮ್ಮ ಅ.ಪ

ಸ್ಮರಿಸುವ ಭಕುತರಪರಿ-ಪರಿಸಲಹುವನ್ಯಾರೇ ಪೇಳಮ್ಮಯ್ಯಾಗುರುವರ ರಾಘವೇಂದ್ರ ಕಾಣಮ್ಮಾ 1

ಸ್ತುತಿಸುವ ಜನರಿಗೆ ಸತಿಸುತ ಸಂಪದ -ಮತಿರಹಿತರಿಗೆ ಸುಮತಿಯ ನೀಡುವನ -ಭೂತಳಜನನಾಥನೆನಿಸಿ ಮಹಾ -ಭೂತಿದಾಯಕ ರಾಘವೇಂದ್ರ ಕಾಣಮ್ಮಾ 2

ಭೂತಪ್ರೇತ ಪಿಶಾಚ ಸುಮಹ -ಪಾತಕವನುಕುಲವೀತಿಹೋತ್ರಸುಖದೂತನೆನಿಪ ಗುರುರಾಯ ಕಾಣಮ್ಮ 3
*******