Showing posts with label ಕ್ಷೇಮದಿಂದಿರುವನಮ್ಮಾ ಶ್ರೀನಿವಾಸ ಭಾಮೆ ಲಕುಮಿ ಕೇಳಮ್ಮಾ gopalakrishna vittala. Show all posts
Showing posts with label ಕ್ಷೇಮದಿಂದಿರುವನಮ್ಮಾ ಶ್ರೀನಿವಾಸ ಭಾಮೆ ಲಕುಮಿ ಕೇಳಮ್ಮಾ gopalakrishna vittala. Show all posts

Sunday, 1 August 2021

ಕ್ಷೇಮದಿಂದಿರುವನಮ್ಮಾ ಶ್ರೀನಿವಾಸ ಭಾಮೆ ಲಕುಮಿ ಕೇಳಮ್ಮಾ ankita gopalakrishna vittala

 ಕ್ಷೇಮದಿಂದಿರುವನಮ್ಮಾ | ಶ್ರೀನಿವಾಸ

ಭಾಮೆ ಲಕುಮಿ ಕೇಳಮ್ಮಾ ಪ.


ಕಾಮಜನಕ ಪೂರ್ಣ ಕಾಮನಾಗಿಹನಮ್ಮ

ಕಾಮಿಸಿದವರ ಅಭೀಷ್ಟ ಕೊಡುವನಮ್ಮ ಅ.ಪ.


ವೈಕುಂಠ ತೊರೆದನಮ್ಮಾ | ನಿನಗಲ್ಲಿ ಬ

ಹು ಕಷ್ಟವೆಂಬೊನಮ್ಮಾ

ನೀ ಕೊಲ್ಲಾಪುರಕೆ ಬರಲು ಖೇದಪಡುತಲಿ

ಆ ಕೋಲಗಿರಿಯಲಿ ತಾನೆ ನೆಲಸಿದನಮ್ಮಾ 1

ಬಲುದಿನವಾಯಿತಂತೇ | ನಿನ್ನನು ನೋಡಿ

ಛಲವಿನ್ನು ಬೇಡವಂತೆ

ಲಲನೆ ಪದ್ಮಾವತಿ ದೂರದಲ್ಲಿಹಳಂತೆ

ವಲಿದು ನೀ ವಕ್ಷ ಸ್ಥಳದಿ ನೆಲಸ ಬೇಕಂತೆ 2

ನೋಡಬೇಕೆಂಬೊನಮ್ಮಾ | ನಿನ್ನೊಡನೊಂದು

ಆಡಬೇಕೆಂಬೊನಮ್ಮಾ

ಮಾಡಿಸಿದೇಯಂತೆ ಪದ್ಮಿಣಿ ಲಗ್ನವ

ಮಾಡಿದ ಉಪಕಾರ ಮರಿಯನಂತಮ್ಮ 3

ತಲೆನೋವು ಬಿಡದಂತಮ್ಮಾ | ತನ್ನಾ ಸೇವೆ

ತಿಳಿದು ಮಾಡುವರ್ಯಾರಮ್ಮಾ

ಲಲನೆ ನಿನ್ಹೊರತಿಲ್ಲ ಕೆÀಲಕಾಲ ಸೇವಿಪೆ

ತಿಳಿದು ತಿಳಿದು ಇಲ್ಲಿ ನೆಲೆÉಸಿದೆÀ ಯಾಕಮ್ಮ 4

ವಡೆಯಳೆ ಭಾಗ್ಯವಂತೆ | ನೀ ತೊರೆಯಲು

ಬಡತನ ಬಂದಿತಂತೆ

ಕೊಡುವ ಜನರ ಕಪ್ಪಕೊಳುತ ದರ್ಶನವನ್ನು

ಕೊಡದೆ ಹೊಡೆಸುವಂಥ ಕಡುಲೋಭ ಕಲಿತನೆ 5

ಅಷ್ಟ ಐಶ್ವರ್ಯ ಪ್ರದೆ | ಹೃದಯದಲಿರೆ

ಎಷ್ಟು ವೈಭವವಿಹುದೆ

ಬಿಟ್ಟೆ ನೀನೀಗೆಂದು ಎಷ್ಟು ಆಭರಣಗ

ಳಿಟ್ಟು ಮೆರೆವೊನಮ್ಮ ದೃಷ್ಟಿ ಸಾಲದು ನೋಡೆ 6

ಎಷ್ಟು ಲೀಲೆಯೆ ನಿಮ್ಮದೂ | ವೈಕುಂಠವ

ಬಿಟ್ಟು ಇಬ್ಬರು ಇಹುದೂ

ಗುಟ್ಟು ಬಲ್ಲಂಥ ಹರಿದಾಸರಿಗೊಲಿಯುವ

ಶ್ರೇಷ್ಠ ಶ್ರೀ ಗೋಪಾಲಕೃಷ್ಣ ವಿಠ್ಠಲನರಸಿ 7

****