Showing posts with label ನಾರಿ ನಾನರಿಯೆನೆ ನಿನ್ನಯ ಮಹಿಮ ಕರುಣದಿ ಇಡು ಪ್ರೇಮ prananatha vittala. Show all posts
Showing posts with label ನಾರಿ ನಾನರಿಯೆನೆ ನಿನ್ನಯ ಮಹಿಮ ಕರುಣದಿ ಇಡು ಪ್ರೇಮ prananatha vittala. Show all posts

Thursday, 5 August 2021

ನಾರಿ ನಾನರಿಯೆನೆ ನಿನ್ನಯ ಮಹಿಮ ಕರುಣದಿ ಇಡು ಪ್ರೇಮ ankita prananatha vittala

 ..

kruti by bagepalli shesha dasaru ಬಾಗೇಪಲ್ಲಿ ಶೇಷದಾಸರು


ನಾರಿ ನಾನರಿಯೆನೆ ನಿನ್ನಯ ಮಹಿಮ

ಕರುಣದಿ ಇಡು ಪ್ರೇಮ ಪ


ಬಾರಿ ಬಾರಿಗೆ ನಿನ್ನ ಭಜಿಸುವ ಭಕ್ತರ

ಪಾರುಗಾಣಿಸಿ ಪೊರೆ ನಾರಿ ಶಿರೋಮಣಿ ಅ.ಪ


ಕನಸು ಮನಸಿನೊಳ್ ನಿನ್ನಯ ಧ್ಯಾನ ಬಿಡದಲೆ ನಾ ಇನ್ನ

ನೆನಸಿ ನೆನಸಿ ಸುಖಿಸುವೆ ಮುನ್ನ ವನಜಾಕ್ಷಿಯೆ ನಿನ್ನ

ಅನುದಿನ ನಿನ್ನನು ಸ್ಮರಿಸುವ ಸುಜನರ

ಘನವನುಳುಹಿ ಕಾಯೆ ಮನಸಿಜನ ತಾಯೆ 1


ಸೃಷ್ಟಿಯೊಳಗೆ ಶೆಟ್ಟಿ ಕೆರೆಯ ತಟದಲಿ ನೀ ನಿಂತು

ಶ್ರೇಷ್ಠಳೆನಿಸಿ ಭಕ್ತರ ಮೊರೆಯ ನಿತ್ಯದಿ ನೀನರಿತು

ಇಷ್ಟದಿ ಕೇಳುತ ಶಿಷ್ಟಜನರ ಅಘ

ಹಿಟ್ಟುಮಾಡಿ ಕಾಯೆ ಶ್ರೀ ಕೃಷ್ಣನ ಜಾಯೆ 2


ಮದನನಯ್ಯನ ಮೋಹದ ರಾಣಿ ಮದಮುಖದ ಶ್ರೇಣಿ

ವಧಿಸಿದ್ಯೆಲೆ ಪರಮ ಕಲ್ಯಾಣಿ ಜಗದೊಳಗತಿ ಜಾಣೆ

ಮದಗೊಂಡನ ಪುರಿ ಸದನ ಮಾಡಿಕೊಂ

ಡೊದಗಿ ಭಕ್ತರ ಮುದವಪಡಿಸಿದ್ಯೆಲೆ 3


ಜಗದೊಳು ನಿನಗೆ ಸರಿಯಾರೆ ಪರಿಪರಿ ವಯ್ಯಾರೆ

ಅಗಣಿತ ಗುಣಗಂಭೀರೆ ಸುಂದರ ಸುಕುಮಾರೆ

ಬಗೆಯಲಿ ಎನ್ನವಗುಣಗಣ ವೆಣಿಸದೆ

ಸೊಗದಿಂದಲಿ ಕಾಯೆ ನಗಧರನ ಪ್ರಿಯೆ 4


ಅನುವನರಿತು ಪಾಲಿಸು ಮುನ್ನನಂಬಿದ ಮನುಜರನ

ಅನುದಿನ ನಿನ್ನ ಪಾದಧ್ಯಾನ ಮನಸಿಗೆ ಕೊಟ್ಟೆನ್ನ

ವನಜಾಕ್ಷಶ್ರೀ ಪ್ರಾಣನಾಥ ವಿಠಲನ

ಸನ್ನಿಧಾನವಿತ್ತು ಮನ್ನಿಸು ತಾಯೆ 5

***