RAO COLLECTIONS SONGS refer remember refresh render DEVARANAMA
..
ಸರಿಯಾರೊ ನಿನಗೆ ಲೋಕದೊಳಗೆ
ಸಮರ್ಯಾರೊ ಪ
ಅಂಜನೆಯಲ್ಹುಟ್ಟಿ ಅಂಬುಧಿಯ ನೀನ್ಹಾರಿದೆ
ಕಂಜಾಕ್ಷಿ ಕರಕಮಲಕೆ ಉಂಗುರವನಿಟ್ಟೆ 1
ಕೊಂದು ಕೌರವರನಾಳಿದ್ಯೊ ಗಜಪುರವನ್ನು
ತಂದು ದ್ರೌಪದಿಗೆ ಸುಗಂಧ ಕುಸುಮವನಿಟ್ಟೆ 2
ಶ್ರೀಮದಾನಂದತೀರ್ಥರ ಚಾರು ಚರಣಕ್ಕೆ ನಾ
ನಮಿಸುವೆನು ಭೀಮೇಶಕೃಷ್ಣನ ಭಕ್ತ3
***