Showing posts with label ಮುಖ್ಯಪ್ರಾಣನೀತಾ ನಮಗೆ ಮುಖ್ಯ ಪ್ರಾಣನೀತಾ vijaya vittala. Show all posts
Showing posts with label ಮುಖ್ಯಪ್ರಾಣನೀತಾ ನಮಗೆ ಮುಖ್ಯ ಪ್ರಾಣನೀತಾ vijaya vittala. Show all posts

Wednesday, 16 October 2019

ಮುಖ್ಯಪ್ರಾಣನೀತಾ ನಮಗೆ ಮುಖ್ಯ ಪ್ರಾಣನೀತಾ ankita vijaya vittala

ವಿಜಯದಾಸ
ಮುಖ್ಯಪ್ರಾಣನೀತಾ | ನಮಗೆ |
ಮುಖ್ಯ ಪ್ರಾಣನೀತ ನಮಗೆ ಮೂಲ ಗುರುವಿತ ಸತತಾ |
ಸೌಖ್ಯವನು ಕರುಣಿಸಿ ನಮ್ಮ ಸಖ್ಯನಾಗಿ ಪೊರೆವನೀತಾ ಪ

ನಿಗಮವೇದ್ಯನೀತಾ ನಂಬಿಕೆಯನೀವ ಚರಣ |
ದುರಿತ ರಾಗಗಳ ಕಳೆನೀತಾ |
ವಿಗಡ ವಿಷವನುಂಡನೀತಾ |
ಹಗಲ ವಲ್ಲಭನಲ್ಲಿ ಸಂಮೊಗದವನಾಗಿ | ಓದಿದನೀತಾ |
ಅಗಣಿತಾದವಿದ್ಯನೀತಾ 1

ಜಗವ ಪಾಲಕನೀತಾ ಚತುರ | ಯುಗದಿ ಬಲುದಿಟ್ಟನೀತಾ |
ಪೆಗಲಿಲಿ ಭೂಮಿ ಮಗಳ ಪತಿಯ | ಜಗಳದಲ್ಲಿ ಪೊತ್ತನೀತಾ |
ಹಗೆಯ ದುಶ್ಶಾಸನ್ನ ವಡಲ ಬಗೆದು ಮುಂದೆ ಚತುರ |
ಮೊಗದವನಾಗಿ ವಾನರ ಬಲವ |
ನಗವ ತಂದೆತ್ತಿದವನೀತಾ 2

ವರ ವೃಕೋದರನೀತಾ ಸಕಲ ಸುರರೊಳು ಬಲು ಪ್ರಬಲನೀತಾ |
ಪರಮ ಮಂಗಳ ಪದದಿ ಭವದ |
ಶರಧಿ ಬತ್ತಿಪನೀತಾ | ಒಮ್ಮೆ ಸ್ಮರಿಸಿದಾಕ್ಷಣ ಬರುವನೀತಾ |
ಮರುತಾವತಾರನೀತಾ ತನ್ನ |
ಶರಣ ಜನರ ಪೊರೆವನೀತಾ 3

ಅಸಮ ಸಾಹಸನೀತಾ ಭಕ್ತರ ವಶವಾಗಿ ವೊಳಗಿಪ್ಪನೀತಾ |
ನೋಡಿ ಪೊರೆವನೀತಾ |
ಅಸುರ ಲಿಂಗಭಂಗವ ಮಾಡಿ |
ಬೆಸನೆ ಮತವ ಕಟ್ಟುವನೀತಾ |
ಹಸನಾದ ಮುನಿ ಈ ರಕ್ಕಸರೆದೆಯ ಶೂಲನೀತಾ 4

ಜ್ಞಾನ ಪೂರ್ಣನೀತಾ ಶ್ರೀಮದಾನಂದತೀರಥನೀತಾ |
ದಾನ ಧರ್ಮ ಪ್ರೇರಕನೀತಾ |
ಪ್ರಾಣನೀತಾ ನಾಶವಿಲ್ಲದೆ ನಾನಾ ಮಹಿಮನೀತಾ |
ನಮಗೇನೇನು ಕೊಡುವನೀತಾ |
ಗಾನವಿಲೋಲ ವಿಜಯವಿಠ್ಠಲ ಧ್ಯಾನ ಮಾಳ್ಪನೀತಾ 5
*******