Showing posts with label ವೇದವ ತಂದು ವಿಧಿಗೀವಂದೆ ನೀಸಾಧು hayavadana VEDAVA TANDU VIDHIGEEVANDE NEE SAADHU. Show all posts
Showing posts with label ವೇದವ ತಂದು ವಿಧಿಗೀವಂದೆ ನೀಸಾಧು hayavadana VEDAVA TANDU VIDHIGEEVANDE NEE SAADHU. Show all posts

Saturday, 11 December 2021

ವೇದವ ತಂದು ವಿಧಿಗೀವಂದೆ ನೀಸಾಧು ankita hayavadana VEDAVA TANDU VIDHIGEEVANDE NEE SAADHU



ವೇದವ ತಂದು ವಿಧಿಗೀವಂದೆ 
ನೀಸಾಧು ಜನರ ಸಲಹಲಿ ಬಂದೆ ||pa||

ಮೋದದಿಂದೆಮ್ಮ ಮನದಿ ನಿಂದೆ ನೀಬಾಧಿಪ ದುರಿತತತಿಯ ಕೊಂದೆ||a.pa||

ಸಕಲ ಸುರರಿಗೆ ಶಿರೋರನ್ನ ನೀಅಕಳಂಕಾಶ್ರಿತಜನಮಾನ್ಯ
ನಿಖಿಲ ನಿಗಮನಿಕರದಿ ವಣ್ರ್ಯ ನಿನ್ನಕರುಣಾಕಟಾಕ್ಷದಿ ನೋಡೆನ್ನ ||1||

ಕೈವಲ್ಯಪದವಿಯ ಕೊಡಬಲ್ಲ ನಿನ್ನಸೇವಿಪ ಸುಜನರಿಗೆಣೆಯಿಲ್ಲ
ಭಾವಜಕೋಟಿಯಿಂದಚೆಲ್ವ ನೀಶ್ರೀವನಿತೆಗೆ ಸಿಲುಕುವನಲ್ಲ ||2||

ಹಯವದನ ಹೃದಯಸದನಜಯ ಶಶಿವರ್ಣ ಜಗತಿಪೂರ್ಣ
ಭಯಹರ ಭಾಸುರ ಸಿರಿಚರಣ ನಿನ್ನದಯಪಾತ್ರಾನುದ್ಧರಿಸೆನ್ನ ||3||
***


vedava tandu vidhigivande | ni |
Sadhu janara salahali bande || pa ||

Modadindemma manadi ninde ni |
Badhipa duritatiya konde | |a.pa. ||

Sakala surarige siroranna ni |
Akalankasrita janamanya |
Nikila nigama nikaradi varnya ninna |
Karuna katakshadi nodenna || 1 ||

Kaivalya padaviya kodaballa ninna |
Sevipa janarigeneyilla |
Bavajakotiyindati celva ni |
Sri vanitege silukuvanalla | |2 ||

Hayavadana hrudaya sadana |
Jaya sasivarna jagati purna |
Bavahara basura siri charana ninna |
Dayapatranuddharisenna | |3 | |
***