....
kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru
ಶ್ರೀ ಶುಕ್ಲನಾಮ ಸಂವತ್ಸರ ಸ್ತೋತ್ರ
ಶುಕ್ಲ ಸಂವತ್ಸರದ ಮುಖ್ಯ ಸ್ವಾಮಿಯು ಸುಖಪೂರ್ಣ ಶೋಕಾದಿ ದೋಷ ದೂರ ಶ್ರೀ ಉಪೇಂದ್ರನಿಗೆ ಆನಮಿಸುವೇ ಪ.
ದೇವಗುರು ಬೃಹಸ್ಪತಿ ದೇವೇಂದ್ರ ಮೊದಲಾದ ಸರ್ವ ದೇವ ವಿಧ ಶಿವ ವಿಧ ಸೇವ್ಯ ಶ್ರೀ ಲಕ್ಷ್ಮೀಶ ಸರ್ವೇಶನು ತಾನೆ ಈ ವರುಷರಾಜ ಶುಕ್ರನೊಳು ಮತ್ತು ವರುಷ ನಿತ್ಯ ನಾಯಕರು ಸಚಿವ ಸೇನಾ ಸಸ್ಯ ರಸ ನಿರಸಾಧಿ ಪತಿಗಳೊಳಾಗಿರುವ 1
ಇದ್ದು ಶೃತಿಗಳ ನಡೆಸಿ ಲೋಕ ಜನರಿಂದ ವಿಹಿತಾ ವಿಹಿತ ಸಾಧನ ಗೈಸಿ ಸಜ್ಜನರಿಗೆ ಕಷ್ಟ ಬಾರದೇ ಕಾಯುವ ಸಾಧು ಸಾಧನ ಮಾಳ್ಪದಕೆ ಅನುಕೂಲ ಶುಕ್ಲ ಸಂವತ್ಸರ ಸಂತಾಪ ಸಿಡಿಲು ಗಾಳಿ ಔಷ್ಣವ ಜಯಿಸಬಹುದು ಹರಿದಯದಿ 2
ಚೌರ್ಯ ಅಸತ್ಯ ನಿಂದಾ ನಿಷ್ಠುರ ದುಷ್ಟ ತನಾದಿಗಳು ಸಂತ್ಯಜಿಸಿ ಪತಿ ತಾಯಿ ತಂದೆ ಗುರು ಸೇವಾ ಹರಿ ಪೂಜೆ ಕಾಯ ವಾಙ್ಮನದಿಂದ ಮಾಳ್ಪರಿಗೆ ಮಧ್ವ ಹುದಬ್ಜಗನು ತೋಯಜಾಸನ ಪಿತ ಪ್ರಸನ್ನ ಶ್ರೀನಿವಾಸ ಒಲಿದು ಸಂರಕ್ಷಿಸುವನು 3 | ಶ್ರೀ ಕೃಷ್ಣಾರ್ಪಣಮಸ್ತು |
***