Showing posts with label ರಾಧಾ ಕೃಷ್ಣ ಮುರಾರಿ ಜಯ ಜಯ krishnavittala. Show all posts
Showing posts with label ರಾಧಾ ಕೃಷ್ಣ ಮುರಾರಿ ಜಯ ಜಯ krishnavittala. Show all posts

Monday, 2 August 2021

ರಾಧಾ ಕೃಷ್ಣ ಮುರಾರಿ ಜಯ ಜಯ ankita krishnavittala

ರಾಧಾಕೃಷ್ಣ ಮುರಾರಿ ಜಯ ಜಯ

ವೇದ ವೇದ್ಯನೆ ವಿಷ್ಣು ಜಯ ಜಯ

ಮೋದತೀರ್ಥ ಸುವಂದ್ಯ ಜಯ ಜಯ

ಮಾಧವಾ ಮಧುಸೂದನಾ ಪ


ಶ್ರೀಧರಾ ಪ್ರದ್ಯುಮ್ನ ಜಯ ಜಯ

ಗೋಧರಾ ಶ್ರೀ ಮತ್ಸ್ಯ ಜಯ ಜಯ

ಭೂಧರಾಧರ ಕೂರ್ಮ ಜಯ ಜಯ

ಭೂಧವ ದಾ-ಮೋದರಾ 1

ನಾರಸಿಂಹ ಉ-ಪೇಂದ್ರ ಜಯ ಜಯ

ಚಾರುವಾಮನ ಪೋರ ಜಯ ಜಯ

ಶ್ರೀ ತ್ರಿವಿಕ್ರಮ ವೀರ ಜಯ ಜಯ

ಭಾರ್ಗವಾ-ದ್ವೀಜ ಪೋಷಕಾ 2

ರಾಮ ಲೋಕೋ-ದ್ಧಾರ ಜಯ ಜಯ

ಸಾಮವಾಸುದೇವ ಜಯ ಜಯ

ಧೀಮ ತಾಂವರ ಬುದ್ಧ ಜಯ ಜಯ

ಶ್ರೀಮನೋಹರ ಕಲ್ಕಿ ಕಲಿವೈರಿ 3

ಈಶ ರಸ ಅನಿ-ರುದ್ಧ ಜಯ ಜಯ

ದೋಶಹರ ಸಂ-ಕಷ್ರ್ಣ ಜಯ ಜಯ

ಶ್ರೀಶಹರಿ ಹೃಷಿಕೇಶ ಜಯ ಜಯ

ಕೇಶವಾ ನಾರಾಯಣಾ 4

ಬಾದರಾಯಣ-ದತ್ತ ಜಯ ಜಯ

ವೇಧ ಅಚ್ಚುತ-ಕಪಿಲ ಜಯ ಜಯ

ಮಧ್ವಗುರು ಮಹಿ-ದಾಸ ಜಯ ಜಯ

ಪದ್ಮನಾಭ ಅಧೋಕ್ಷಜ 5

ಶ್ರೀ ಜನಾರ್ಧನ-ಋಷಭಜಯ ಜಯ

ನೈಜತೇಜಾ ನಂತ ಜಯ ಜಯ

ವಾಜಿವದನ ಇಂ-ಇಂದ್ರ ಜಯ ಜಯ

ರಾಜ ಭಕುತರ ಭೋಜ ಸುರರಾಜ 6

ಯಜ್ಞ ಅಜ ಧನ್ವಂತ್ರಿ ಜಯ ಜಯ

ಪೃಶ್ನಿ ಗರ್ಭ ಮುಕುಂದ ಜಯ ಜಯ

ಚೆನ್ನ ಬೋಧಕ ಹಂಸ ಜಯ ಜಯ

ಶಿಂಶುಮಾರ ಸುಮೋಹಿನಿ 7

ಪಾಂಡುರಂಗ ವಿ-ಠೋಬ ಜಯ ಜಯ

ತೊಂಡವತ್ಸಲ-ವರದ ಜಯ ಜಯ

ಗಂಡುಗಲಿ ತಿ-ಮ್ಮಪ್ಪ ಜಯ ಜಯ

ರಂಗನಾಥ ಪ-ರಾದ್ಯನಂತನೆ 8

ವಿಶ್ವತೈಜಸ-ಪ್ರಾಜ್ಞ ಜಯ ಜಯ

ಶಶ್ವದೇಕನೆ-ತುರಿಯ ಜಯ ಜಯ

ಶ್ರೀಶ “ಶ್ರೀ ಕೃಷ್ಣ-ವಿಠಲ” ಜಯ ಜಯ

ಗೋವಿಂದಾ ಪುರು-ಷೋತ್ತಮಾ 9

****