Showing posts with label ಮಾಡಿರೊ ಪಾಡಿರೊ ಲೋಕದೊಳಗೆ ಇದೆ ಬೀರುತಾ vijaya vittala. Show all posts
Showing posts with label ಮಾಡಿರೊ ಪಾಡಿರೊ ಲೋಕದೊಳಗೆ ಇದೆ ಬೀರುತಾ vijaya vittala. Show all posts

Thursday, 17 October 2019

ಮಾಡಿರೊ ಪಾಡಿರೊ ಲೋಕದೊಳಗೆ ಇದೆ ಬೀರುತಾ ankita vijaya vittala

ವಿಜಯದಾಸ
ಮಾಡಿರೊ ಪಾಡಿರೊ |
ಲೋಕದೊಳಗೆ ಇದೆ ಬೀರುತಾ ಸಾರುತಾ ಶ್ರೀಕಾಂತನ ವೊಲಿಸಿ ಪ

ದಶಮಿ ಏಕಾದಶಿ ದ್ವಾದಶಿ ದಿನತ್ರಯ |
ವಸುಧಿಯೊಳಗೆ ಮಹಾವ್ರತವೆಂದು ತಿಳಿದು ತ್ರಿ |
ದಶರೆಲ್ಲ ಕೈ ಕೊಂಡು ಮಾಡಿದರಂದು ರಂ |
ಜಿಸುವ ಸತ್ಕರ್ಮದಲ್ಲಿ |
ಬಿಸಜನಾಭನು ಲಕುಮಿಗೆ ಪೇಳಿದ ವ್ರತ |
ಹಸನಾಗಿ ಬೊಮ್ಮಗೆ ಅರಹು ಮಾಡಲು ದೇವ |
ಋಷಿಗೆ ಅಜನು ಪೇಳಲಾ ಮುನಿ ಬೀರಿದಾ
ದಶ ದಿಕ್ಕಿನೊಳಗೊಂದು 1

ಉದಯಕಾಲದೆಲೆದ್ದು ಸಂಸಾರಯಾತ್ರೆ ಎಂದು |
ಬದಿಯಲ್ಲಿದ್ದವರೆಲ್ಲ ಹರಿದಾಸ ದಾಸಿಯರು
ಹೃದಯದೊಳೀಪರಿ ಯೋಚಿಸಿ ಅಜ್ಞಾನ ಒಂದು ಕಡೆಗೆ ನೂಕಿ |
ಸದಮಲನಾಗಿ ಸ್ನಾನಾದಿಯ ಮಾಡಿ ಮ
ವಿಧಿ ಮುಗಿಸಿ ಶ್ರವಣ ಸಾರಾ ಹೃದಯರಿಂದಲಿ ಕೇಳಿ2

ಗೋವಿಂದನ ಚರಣಕೆ ಎತ್ತಿ ನಿರ್ಮಲ ಚಿತ್ತ |
ದಿಂದಲಿ ನಲಿವುತ ಹಿಗ್ಗಿ ಹಾರೈಸಿ ಆನಂದ ವಾರಿಧಿಯಲ್ಲಿ |
ಕುಂದದೆ ಸೂಸುತ ಗೆಳೆಯರ ಒಡಗೂಡಿ |
ತಂದು ಪುಷ್ಪಗಳಿಂದ ಮಂಟಪವ ವಿರಚಿಸಿ |
ಇಂದು ಸ್ಥಾಪಿಸಿ ತುತಿಸಿ 3

ಜ್ಞಾನಿಗಳೊಡನೆ ಕುಳ್ಳಿದ್ದು ಸುಜ್ಞಾನಿಗಳು ಶುದ್ಧ ಗಾ|
ಆನನ ಕೂಗುತ ಹಾಡುತ ಪಾಡುತ |
ಧ್ಯಾನವ ಗೈವುತಲಿ |
ಕಾಣಬಾರದಂತೆ ಪ್ರಜೆದೊಳಗೆ ತೋರಿ |
ಮಗುವಿನಂತೆ ಶ್ರೀನಿವಾಸನ ನೆನಸಿ 4

ಕೂಡಿ ಸೋಗು ವೈಯಾರದಿ |
ಕಾಲಲಿ ಗೆಜ್ಜೆಯ ಕಟ್ಟಿ |
ವಲಯಾಕಾರ |
ಮೇಲು ಚಪ್ಪಳೆಯಿಂದ |
ಬಾಲವೃದ್ಧರು ನಿಂದು ಕುಣಿಕುಣಿದಾಡಿ ಹಿ |
ಯಾಲಲಿ ಹರಿಯ ಸಂಕೀರ್ತನೆ ಕೀರ್ತಿಸಿ |
ಸೋಲದೆ ಘನಸ್ವರ ಸ್ವರದಿಂದಲಿ ಕೂಗಿ ವಿ |
ಶಾಲ ಭಕುತಿ ಒಲಿಸಿ 5

ಕಿರಿಬೆವರೊದಕ ಮೊಗದಿಂದಿಳಿಯಲು |
ಉರದಲಿ ಇದ್ದ ದೇವಗೆ ಅಭಿಷೇಚನೆ |
ಪರವಶವಾಗಿ ಮೈಮರೆದು ತಮ್ಮೊಳು ತಾವು |
ಕರದು ತರ್ಕೈಸುತಲಿ |
ಕಿರಿನಗೆಯಿಂದ ತೋಳುಗಳು ಅಲ್ಲಾಡಿಸಿ |
ಎರಡು ಭುಜವ ಚಪ್ಪರಿಸಿ ಏಕಾದಶಿ |
ದುರಿತ ರಾಸಿಗೆ ಪಾವಕನೆಂದು ಕೂಗಿ ಬೊಬ್ಬಿರಿದು ಬಿರಿದು ಸಾರಿ6

ಮಧ್ಯ ಮಧ್ಯದಲಿ ಮಂಗಳಾರುತಿ ಎತ್ತಿ |
ಮಧ್ವರಾಯರೆ ಮೂರು ಲೋಕಕೆ ಗುರುಗಳು |
ಸಿದ್ಧಾಂತ ಮುನಿ ಸಮ್ಮತಾ |
ಮಲ ಮೂತ್ರವನು ಕ್ರಿಮಿವ ಮನವು |
ಮೆದ್ದಾ ಸದ್ದೋಷಿ ಚಂಡಾಲ ವೀರ್ಯಕ್ಕೆ ಬಿದ್ದವ ನಿಜವೆನ್ನಿ 7

ಸಾಗರ ಮೊದಲಾದ ತೀರ್ಥಯಾತ್ರೆಯ ಫಲ |
ಭೂಗೋಳದೊಳಗುಳ್ಳ ದಾನ ಧರ್ಮದ ಫಲ |
ಆಗಮ ವೇದಾರ್ಥ ಓದಿ ಒಲಿಸಿದ ಫಲ |
ಯೋಗ ಮಾರ್ಗದ ಫಲವೊ |
ಜಾಗರ ಮಾಡಿದ ಮನುಜನ ಚರಣಕ್ಕೆ
ಬಾಗಿದವಗೆ ಇಂಥ ಫಲಪ್ರಾಪ್ತಿ ನಿರ್ದೋಷನಾಗುವ ವೈರಾಗ್ಯದಿ 8

ನಿತ್ಯಾ ನೈಮಿತ್ಯಕ ಮಾಡು ಮಾಡದಲಿರು |
ಪೋಗಾಡದೆ ಸದಾಚಾರ
ಸ್ಮøತಿಯಂತೆ ಅತ್ಯಂತ ಪಂಡಿತ ಪಾವನ್ನ |
ಉತ್ತಮರೊಡಗೂಡಿ ಮೃಷ್ಟಾನ್ನ ಭುಂಜಿಸಿ |
ಮೃತ್ಯು ಜೈಸಿ ಸದ್ಗತಿಗೆ ಸತ್ಪಥಮಾಡು |
ಸತ್ಯ ಮೂರುತಿ ನಮ್ಮ ವಿಜಯವಿಠ್ಠಲರೇಯ |
ನಿತ್ಯ ಬಿಡದೆ ಕಾವಾ 9
**********