Showing posts with label ಮೂರ್ಖರ ವಡಂಬಡಿಸಲಾಗವದೆಂದೆಂದು gurumahipati. Show all posts
Showing posts with label ಮೂರ್ಖರ ವಡಂಬಡಿಸಲಾಗವದೆಂದೆಂದು gurumahipati. Show all posts

Wednesday, 1 September 2021

ಮೂರ್ಖರ ವಡಂಬಡಿಸಲಾಗವದೆಂದೆಂದು ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಮೂರ್ಖರ ವಡಂಬಡಿಸಲಾಗವದೆಂದೆಂದು ಪ 


ಮಳಲ ತಂದಿಕ್ಕಿ ಗಾಣದೊಳಗ ಸಾಯಸದಿಂದ | ಬಲಿದು ಎಣ್ಣೆಯ ತೆಗೆಯಲಿಬಹುದು 1 

ಗಿರಿಗಳಂದದಿ ಬಹಥೆರೆಗಳ ಕಡಿಯುತ | ಶರಧಿಯದಾಟಿ ಹೋಗಲು ಬಹುದು 2 

ಇಳೆಯೊಳು ತಿರುಗುತ ದೇಶ ದೇಶಗಳನು | ಮೊಲದಾ ಕೋಡವ ದೊರಕಿಸಬಹುದು 3 

ತೋರುವ ಮೃಗಜಲ ಹಿಡಿದು ಪ್ರಾಶನ ಮಾಡಿ | ನೀರಡಕಿ ಶಾಂತ ಮಾಡಿಲಿಬಹುದು 4 

ಮೊಸಳಿದಾಡಿಯೊಳಿಹ ಅಮೌಲಿಕ ರತ್ನ ತನ್ನ | ವಶವನೆ ಮಾಡಿಕೊಳ್ಳಲಿಬಹುದು 5 

ಪರಿ | ಶಿರಸದಿ ಬೇಗ ಧರಿಸಲಿಬಹುದು 6 

ಗುರುಮಹಿಪತಿಸುತ ಪ್ರಭು ಗುರುತಿಲ್ಲವರಾ | ನೆರಳಿಗೆ ದೂರ ಕೈ ಮುಗಿವನು 7

***