Showing posts with label ಮುನಿರಾಯಗೊಂದಿಸುವೆನನು ದಿನದಲಿ jagannatha vittala. Show all posts
Showing posts with label ಮುನಿರಾಯಗೊಂದಿಸುವೆನನು ದಿನದಲಿ jagannatha vittala. Show all posts

Saturday, 14 December 2019

ಮುನಿರಾಯಗೊಂದಿಸುವೆನನು ದಿನದಲಿ ankita jagannatha vittala

ಜಗನ್ನಾಥದಾಸರು
ಮುನಿರಾಯಗೊಂದಿಸುವೆನನು ದಿನದಲಿ
ಮನವಚನಕಾಯದಿಂ ಮರೆಯದಲೆ ಗುರು ಮಧ್ವ ಪ

ವಾಸುದೇವ ಅಮಾನವಪ್ರತಿಮ ವಿಷ್ಣು ಹರಿ
ದಾಸವರ ಪ್ರಥುಧಿ ತ್ರಿಜಗದ್ಗುರು ವರ
ಶ್ವಾಸಪತಿ ಚತುರಧೀ ತ್ರಿಜಗದ್ಗುರುವರೇಣ್ಯ
ಬೋಧ 1

ವಿಭುವಿಶ್ವವಿತುಪೂರ್ಣ ಬೋಧಾಲವ
ಸುಬುದ್ಧಿ ತ್ರಿಭುವನಾಲಯ ಧಿಷಣ ಭೂರಿಚೇತಾ
ಅಮಿತ ಬುದ್ಧಿ ಸುಖತೀರ್ಥ ಜಗ
ದಭಿವಂದ್ಯದಭ್ರಚೇತಸ ಮಹಾಮನ ಮಧ್ವ2

ಸೂರಿಮಸ್ತಕ ಮುಕುಟ ಸಕಳಜ್ಞ ಸರ್ವವಿತ್
ಮಾರುತಾತ್ಮಜ ಪೂರ್ಣ ಪುಷ್ಠ ಬುದ್ಧಿ
ವೃಜಿನ ನಾಶಕನಂತ
ಕವಿ ಲೋಕನಾಯಕ ಪ್ರಾಜ್ಞ 3

ಆನಂದತೀರ್ಥ ಗುರು ಬುದ್ಧಿ ಸುಖತೀರ್ಥ ಅನು
ಮಾನಯತಿ ಸಂಮೋದ ಹಂಸರಾಟ್
ಚಾರು ಕೃತಾಂತವಿತ್ ಮಹಾ
ಮಾನಸ ಪ್ರ್ರಮೋದಾರ್ಯವರ್ಯ ವಿದ್ಯಾಧಿಪತಿ4

ಭುವನ ಭೂಷಣ ವ್ಯಾಸಶಿಷ್ಯ ಅಜಸಮ ಧನ್ಯ
ಪ್ರವರ ಪ್ರಾe್ಞÁರ್ಯ ಧ್ವಸ್ತದುರಾಗಮ
ಕವಿರಾಯಾ ಸುಹೃತ್ ಅಖಿಳಜ್ಞ ದಶಧಿಷಣನೆ
ಅವಿರಳ ಜಗನ್ನಾಥ ವಿಠಲನಿಗತಿ ಪ್ರಿಯ 5
********