Showing posts with label ಎನಗ್ಯಾರು ಗತಿಯಿಲ್ಲ ನಿನಗ್ಯಾರು ಸರಿಯಿಲ್ಲ vijaya vittala. Show all posts
Showing posts with label ಎನಗ್ಯಾರು ಗತಿಯಿಲ್ಲ ನಿನಗ್ಯಾರು ಸರಿಯಿಲ್ಲ vijaya vittala. Show all posts

Wednesday 16 October 2019

ಎನಗ್ಯಾರು ಗತಿಯಿಲ್ಲ ನಿನಗ್ಯಾರು ಸರಿಯಿಲ್ಲ ankita vijaya vittala

ಎನಗ್ಯಾರು ಗತಿಯಿಲ್ಲ ನಿನಗ್ಯಾರು ಸರಿಯಿಲ್ಲ (/ನಿನಗನ್ಯ ವಿಧಿಯಿಲ್ಲ?)
ನನಗು ನಿನಗು ನ್ಯಾಯ ಪೇಳುವರಿಲ್ಲ ||ಪ||

ಒಂದುಗೂಡಿಲಿ ಬಂದು ಒಂದು ಕ್ಷಣವಗಲದೆ
ಎಂದೆಂದು ನಿನ್ನ ಪಾದ ನಾ ಪೊಂದಿರಲು
ಬಂದ  ವಿಷಯಂಗಳಿಗೆ ಎನ್ನನೊಪ್ಪಿಸಿ ಕೊಟ್ಟು
ನೀನಂಧಕನಂತೆ ನೋಡುವದುಚಿತವೆ ರಂಗಾ ||೧||

ಪರಸತಿಯರ ಕೂಡಿದರೆ ಪರಮಪಾತಕವೆಂದು
ಪರಿಪರಿಯ ನರಕಗಳನು ನಿರ್ಮಿಸಿರುವಿ
ಪರಸತಿಯರೊಲುಮೆ ನಿನಗೊಪ್ಪಿತೆಲೋ ದೇವಾ    , ನಿನ್ನ
ದೊರೆತನಕಂಜಿ ನಾ ಶರಣೆಂಬೆನಲ್ಲದೇ ||೨||

ನಿನ್ನಾಜ್ಞಾಧಾರನಾಗಿ ನಿನ್ನ ಪ್ರೇರಣೆಯಿಂದ
ಅನೇಕ ವಿಧಕರ್ಮಗಳ ಮಾಡುತಿರುವೆ
ಎನ್ನಪರಾಧಗಳ ವರ್ಣಿಸಲಾಗದೊ, ದೇವ
ಪನ್ನಂಗಶಯನ ಶ್ರೀ ವಿಜಯವಿಠಲನೇ ||೩||
********


ವಿಜಯದಾಸ
ಎನಗ್ಯಾರು ಗತಿಯಿಲ್ಲ ನಿನಗ್ಯಾರು ಸರಿಯಿಲ್ಲ |
ಎನಗೆ ನಿನಗೆ ನ್ಯಾಯ ಪೇಳುವರಿಲ್ಲ ಪ


ಒಂದುಗೂಡಿಲಿ ಬಂದು ಒಂದು ಕ್ಷಣ ವಗಲದೆ |

ಪಾದ ಪೊಂದಿರಲೂ ||
ಬಂದ ವಿಷಯಂಗಳಿಗೆ ಯೆನ್ನನೊಪ್ಪಿಸಿ ಕೊಟ್ಟು |
ನೀನಂಧಕನಂತೆ ನೋಡುವದುಚಿತವೆ ರಂಗಾ 1

ಪರಸತಿಯರ ಕೂಡಿದರೆ ಪರಮ ಪಾತಕವೆಂದು |

ಪರಿ ಪರಿಯ ನರಕಗಳ ನಿರ್ಮಿಸಿರುವಿ ||
ಪರಸತಿಯರೊಲುಮೆ ನಿನಗೊಪ್ಪಿತೆಲೋ ದೇವಾ | ನಿನ್ನ |
ದೊರೆತನಕಂಜಿ ನಾ ಶರಣೆಂಬೆನಲ್ಲದೇ 2

ನಿನ್ನಾಜ್ಞ್ಞಧಾರನಾಗಿ ನಿನ್ನ ಪ್ರೇರಣೆಯಿಂದ |

ಅನೇಕ ವಿಧಕರ್ಮಗಳ ಮಾಡುತಿರುವೇ ||
ಯೆನ್ನಪರಾಧಗಳ ವರ್ಣಿಸಲಾಗದೊ | ದೇವ |
ಪನ್ನಂಗಶಯನ ಶ್ರೀ ವಿಜಯವಿಠಲನೇ 3

**********