Showing posts with label ಪರಮೇಷ್ಠಿ ನಿರುತನಿಷ್ಠಿ ಮಾಣದೆ ಕೊಡು vijaya vittala. Show all posts
Showing posts with label ಪರಮೇಷ್ಠಿ ನಿರುತನಿಷ್ಠಿ ಮಾಣದೆ ಕೊಡು vijaya vittala. Show all posts

Wednesday, 16 October 2019

ಪರಮೇಷ್ಠಿ ನಿರುತನಿಷ್ಠಿ ಮಾಣದೆ ಕೊಡು ankita vijaya vittala

ವಿಜಯದಾಸ
ಪರಮೇಷ್ಠಿ ನಿರುತನಿಷ್ಠಿ
ಮಾಣದೆ ಕೊಡು ಮನಮುಟ್ಟಿ ಪ

ನಾನಾ ನಾಡಿನೊಳು ನೀನೆ ಪಿರಿಯನೆಂದು
ಆನಂದ ಮತಿಯಿಂದ ಗಾನವ ಮಾಡುವೆ ಅ.ಪ.

ಪುರುಷನಾಮಕ ವಿಧಾತ ಹಂಸವರೂಥ
ಸರಸಿಜ ಗರ್ಭ ಶಿವತಾತ
ಪರಮ ಗುರುವೆ ವಿಖ್ಯಾತ ಪೂರ್ವ ಮಾರುತ
ತಾರತಮ್ಯದೊಳುನ್ನತ
ಸಿರಿ ಪರಮಾಣು ಪ್ರದೇಶ ವರ ಶಬ್ದ ಪಿಡಿದು
ಪರಿ ಪರಿಯಿಂದಲಿ
ಶತಾನಂದ 1

ಜಗವÀ ಪುಟ್ಟಿಸುವ ಮಹಾಧೀರ ತತ್ವಶರೀರ
ಮಗುಳೆ ಅನಿರುದ್ಧಕುಮಾರ
ಝಗಿಝಗಿಪ ಮಕುಟಧರ ಜೀವನೋದ್ಧಾರ
ನಿಗಭಿಮಾನಿ ಚತುರ-ಮೊಗನೆ ಪ್ರಬಲ ಅಹಿಗರುಡಾದ್ಯರಿಗೆಲ್ಲ
ಅಗಣಿತ ವಾಕ್ಯನೆ
ಹಗಲಿರುಳು ಮನಸಿಗೆ ಸುಖವಾಗುವ
ಬಗೆ ಕರುಣಿಸು ನಮ್ಹಗೆಗಳ ಕಳೆದು 2

ವಾರಿಜಾಸನ ಲೋಕೇಶ ಭಕುತಿವಿಲಾಸ
ಚಾರುಸತ್ಯ ಲೋಕಾಧೀಶ
ಸಾರಹೃದಯ ವಿಶೇಷ ಮಹಿಮನೆ ದೋಷ
ದೂರ ನಿರ್ಮಲ ಪ್ರಕಾಶ
ಧಾರುಣಿಯೊಳಗವತಾರ ಮಾಡದ ದೇವ
ಸಾರಿದೆ ನಿನ್ನಂಘ್ರಿವಾರಿಜಯುಗಳವ
ಸಾರಿಸಾರಿ ವಿಜಯವಿಠ್ಠಲನ್ನ
ಆರಾಧಿಪುದಕೆ ಚಾರುಮತಿಯ ಕೊಡು 3
**********