ವಂದನೆ ಮಾಡಿರೈ ವ್ಯಾಸ ಮುನೀಂದ್ರರ ಪಾಡಿರೈ ಪ
ವಂದಿಸುವರ ಭವಬಂಧವ ಬಿಡಿಸಿ ಆ
ನಂದವ ಕೊಡುವ ಕರ್ಮಂದಿವರೇಣ್ಯರ ಅ.ಪ
ನಂದತೀರ್ಥಮತ ಸಿಂಧುವಿಗೆ ಪೂರ್ಣಚಂದ್ರಾ
ಸದ್ಗುಣ ಸಾಂದ್ರಾ
ಚಂದ್ರಿಕಾದಿ ಪ್ರಬಂಧತ್ರಯ ನಿರ್ಮಿಸಿದಾ ಮತವರ್ಧಿಸಿದಾ
ನಂದದಿಂದ ಮುಚಕುಂದ ವರದನರ್ಚಿಸಿದಾ ಸತಿ ಮೆಚ್ಚಿಸಿದಾ
ಹಿಂದಕೆ ಹರಿಯನು ಸ್ತಂಭದಿ ತೋರಿದ ಕಂದ ಪ್ರಹ್ಲಾದರೆ
ಬಂದಿಹರೆನ್ನುತ 1
ಕೃಷ್ಣರಾಯನಿಗೆ ದುಷ್ಟಯೋಗ ಪರಿಹರಿಸಿ ರಾಜ್ಯವಹಿಸಿ ಯ-
ಥೇಷ್ಟ ದಾನಫಲಕೊಟ್ಟು ನೃಪನನುಗ್ರಹಿಸಿ ರಾಜ್ಯದೊಳಿರಿಸಿ
ಶ್ರೇಷ್ಠವಾದ ಸಿಂಹಾಸನದಲಿ ಕುಳ್ಳಿರಿಸಿ ಆಜ್ಞೆಯ ತಿಳಿಸಿ
ಎಷ್ಟು ಮಹಿಮರೆಂದರಿತು ಇವರ ಮನ ಮುಟ್ಟಿ ಭಜಿಪರಿಗ
ಭೀಷ್ಟೆಯಗರಿವರ 2
ಧರೆಯೊಳು ಚರಿಸುತ ಪರಮತತಿಮಿರಕೆ
ಸೂರ್ಯಯತಿ ಕುಲ-
ವರ್ಯ ಗುರುಮಧ್ವಮ ತದಿಸದ್ವೈಷ್ಣವ ಕುಮುದಕೆ
ಭಾರ್ಯಾ ಪಾವನ ಚರ್ಯ ಪರಮಮಹಿಮ ಬ್ರಹ್ಮಣ್ಯ-
ತೀರ್ಥರಿಗೆ ತನಯಾ ಕವಿಜನಗೇಯಾ ಶರಣರ ಪೊರಿಯುವ
ಶಿರಿಕಾರ್ಪರನರಹರಿಯ ನೊಲಿಸಿರುವ ಪರಮ ಮಹಾತ್ಮರ3
****