ankita ನರಸಿಂಹವಿಠಲ (2)
ರಾಗ: ಶಂಕರಾಭರಣ ತಾಳ: ಆದಿ
ನೋಡಿದ್ಯಾ ಗುರುಗಳ ಕೊಂಡಾಡಿದ್ಯಾ
ಈಡಾಡಿದ್ಯಾ ಪಾಪಂಗಳ ||ಆಹಾ|| ಪ
ಮನಸಿಲಿ ನೋಡಿದ್ಯಾ ಯತಿಗಳನ್ನ
ನಾಡಿನೊಳಗೆ ಈಡಿಲ್ಲದಿಹ ಈ ಗುರುಗಳಾ ಅ.ಪ.
ಹೊದ್ದ ಕಾವಿಶಾಠಿಯಲ್ಲಿ ಶ್ರೀ
ಮುದ್ರೆ ಹಚ್ಚಿದ ದೇಹಕಾಂತಿಯು ||ಆಹಾ||
ತಿದ್ದಿದ ಅಂಗಾರದ ನಡುವೆ ಅಕ್ಷತೆಯು
ಎದ್ದುಬರುವಂಥ ಈ ಮುದ್ದುಗುರುಗಳಾ 1
ನಿಂತ ಎದುರಲ್ಲಿ ಮುಖ್ಯಪ್ರಾಣಾ ಬೇಡಿ-
ದಂಥ ವರಗಳ ಕೊಡುವ ಜಾಣಾ ||ಆಹಾ||
ಜಗದಂತರದೊಳಗೆ ಪ್ರವೀಣಾ ಸೀತಾ-
ಕಾಂತರೊಳಗೆ ಅತಿಪ್ರಾಣಾ 2
ಮಂತ್ರಾಲಯದಲ್ಲಿರುವ ಮುದ್ದು ಬೃಂದಾವನದ ನೋಟ ಆ
ನಮ್ಮಲಿದ್ದ ಪಾಪಗಳೆಲ್ಲ ಓಟ ಅಲ್ಲಿ ವಿದ್ವಾಂಸರ ಜಗ್ಯಾಟ ||ಆಹಾ||
ಹದ್ದುವಾಹನ ನರಸಿಂಹವಿಠ್ಠಲದೂತ ನೀನು
ದಾರಿದ್ರ್ಯಗಳೆಲ್ಲವ ಪರಿಹರಿಸುವಂಥಾ 3
***