Monday, 6 September 2021

ನೋಡಿದ್ಯಾ ಗುರುಗಳ ಕೊಂಡಾಡಿದ್ಯಾ ankita narasimha vittala2

ankita ನರಸಿಂಹವಿಠಲ (2)

ರಾಗ: ಶಂಕರಾಭರಣ ತಾಳ: ಆದಿ


ನೋಡಿದ್ಯಾ ಗುರುಗಳ ಕೊಂಡಾಡಿದ್ಯಾ

ಈಡಾಡಿದ್ಯಾ ಪಾಪಂಗಳ ||ಆಹಾ||


ಮನಸಿಲಿ ನೋಡಿದ್ಯಾ ಯತಿಗಳನ್ನ

ನಾಡಿನೊಳಗೆ ಈಡಿಲ್ಲದಿಹ ಈ ಗುರುಗಳಾ ಅ.ಪ.


ಹೊದ್ದ ಕಾವಿಶಾಠಿಯಲ್ಲಿ ಶ್ರೀ

ಮುದ್ರೆ ಹಚ್ಚಿದ ದೇಹಕಾಂತಿಯು ||ಆಹಾ||

ತಿದ್ದಿದ ಅಂಗಾರದ ನಡುವೆ ಅಕ್ಷತೆಯು

ಎದ್ದುಬರುವಂಥ ಈ ಮುದ್ದುಗುರುಗಳಾ 1

ನಿಂತ ಎದುರಲ್ಲಿ ಮುಖ್ಯಪ್ರಾಣಾ ಬೇಡಿ-

ದಂಥ ವರಗಳ ಕೊಡುವ ಜಾಣಾ ||ಆಹಾ|| 

ಜಗದಂತರದೊಳಗೆ ಪ್ರವೀಣಾ ಸೀತಾ-

ಕಾಂತರೊಳಗೆ ಅತಿಪ್ರಾಣಾ 2

ಮಂತ್ರಾಲಯದಲ್ಲಿರುವ ಮುದ್ದು ಬೃಂದಾವನದ ನೋಟ ಆ

ನಮ್ಮಲಿದ್ದ ಪಾಪಗಳೆಲ್ಲ ಓಟ ಅಲ್ಲಿ ವಿದ್ವಾಂಸರ ಜಗ್ಯಾಟ ||ಆಹಾ||

ಹದ್ದುವಾಹನ ನರಸಿಂಹವಿಠ್ಠಲದೂತ ನೀನು

ದಾರಿದ್ರ್ಯಗಳೆಲ್ಲವ ಪರಿಹರಿಸುವಂಥಾ 3

***

No comments:

Post a Comment