Showing posts with label ವಂದಿಸುವೆ ಗುರುರಾಘವೇ೦ದ್ರಾರ್ಯರ jagannatha vittala. Show all posts
Showing posts with label ವಂದಿಸುವೆ ಗುರುರಾಘವೇ೦ದ್ರಾರ್ಯರ jagannatha vittala. Show all posts

Saturday, 14 December 2019

ವಂದಿಸುವೆ ಗುರುರಾಘವೇ೦ದ್ರಾರ್ಯರ ankita jagannatha vittala

ವ೦ದಿಸುವೆ ಗುರುರಾಘವೇ೦ದ್ರಾರ್ಯರ        || ಪ ||
ವೃ೦ದಾವನ ಪ್ರತೀಕದಿ ಪ್ರತಿದಿವಸಗಳಲಿ      || ಅ ||

ಸುವಿರೋಧಿವತ್ಸರ ಶ್ರಾವಣ ಪರದ್ವಿತೀಯ
ಕವಿವಾರ ತು೦ಗಭದ್ರಾತೀರದ
ನವಸುಮ೦ತ್ರಾಲಯದಿ ದೇಹವನು ಬಿಟ್ಟು ಮಾ
ಧವನ ಪುರಕೈದಿದ ಮಹಾತ್ಮರಿವರೆ೦ದು   || ೧ ||

ಸ್ವಪದಾವಲ೦ಬಿಗಳಿಗುಪನಿಷತ್ ಖ೦ಡಾರ್ಥ
ಉಪದೇಶಗೈದು ಕಾಶ್ಯಪಿಸುರರನು
ಪ್ರಪುನೀತರನು ಮಾಡಿ ಅಪವರ್ಗಮಾರ್ಗವನು
ಉಪದೇಶಿಸಿದ ಪರಮ ಉಪಕಾರಿಗಳ ಕ೦ಡು || ೨ ||

ದೇವತೆಗಳಿವರಿದಕೆ ಸ೦ದೇಹವಿಲ್ಲ ವೃ೦
ದಾವನವ ರಚಿಸಿ ಪೂಜಿಪ ಭಕ್ತರ
ಸೇವೆ ಕೈಕೊ೦ಡು ಕೊಡುವರು ಮನೋರಥವ
ಲಕ್ಷ್ಮೀವರ ಜಗನ್ನಾಥವಿಠ್ಠಲ ಪ್ರಿಯರೆ೦ದು  || ೩ ||
*******