Showing posts with label ಎನ್ನ ಬಿಟ್ಟು ನೀನಗಲದೆ ಶ್ರೀನಿವಾಸ ನಿನ್ನ ನಂಬಿದ purandara vittala ENNA BITTU NEENAGALADE SRINIVASA NINNA NAMBIDA. Show all posts
Showing posts with label ಎನ್ನ ಬಿಟ್ಟು ನೀನಗಲದೆ ಶ್ರೀನಿವಾಸ ನಿನ್ನ ನಂಬಿದ purandara vittala ENNA BITTU NEENAGALADE SRINIVASA NINNA NAMBIDA. Show all posts

Saturday, 11 December 2021

ಎನ್ನ ಬಿಟ್ಟು ನೀನಗಲದೆ ಶ್ರೀನಿವಾಸ ನಿನ್ನ ನಂಬಿದ purandara vittala ENNA BITTU NEENAGALADE SRINIVASA NINNA NAMBIDA



ಎನ್ನ ಬಿಟ್ಟು ನೀನಗಲದೆ ಶ್ರೀನಿವಾಸ ||ಪ||

ನಿನ್ನ ನಂಬಿದ ದಾಸನಲ್ಲವೇನೋ ||ಅ||


ತನುವೆಂಬೊ ಮಂಟಪದಿ ಮನವೆಂಬೊ ಹಸೆ ಮಂಚ , ಘನವಾದ ಸುಜ್ಞಾನ
ದೀಪದ ಬೆಳಕಲ್ಲಿ, ಸನಕಾದಿ ವಂದ್ಯ ನೀ ಬೇಗ ಬಾರೋ ||

ಪಂಚರಿವರು ಯಾವಾಗಲೂ, ಹೊಂಚ್ಹಾಕಿ ಎನ್ನನು ನೋಡುತಾರೆ
ಕೊಂಚಗಾರರು ಆರು ಮಂದಿ ಅವರು, ಹಿಂಚು ಮಿಂಚಿಲ್ಲದೆ ಎಳೆಯುತಾರೆ ||

ಮುನ್ನ ಮಾಡಿದ ದುಷ್ಕರ್ಮದಿ ಬಳಲಿದೆ, ಇನ್ನಾದರು ನೀನೆನ್ನ ಕಾಯೊ
ಘನ್ನ ಮಹಿಮ ಶ್ರೀ ಪುರಂದರವಿಠಲ, ಮನ್ನಿಸಿ ಮಮತೆ ಎನ್ನಲಿ ತೋರೊ ||
***

ರಾಗ ಮಂಚಿ. ಛಾಪು ತಾಳ

pallavi

enna biTTu nInagalade shrInivAsa

anupallavi

inna nambida dAsanallavEnO

caraNam 1

tanuvembo maNTapadi manavembo hase manca
ghanavAda sujnAna dIpada beLagalli sanakAdi vandya nI bEga bArO

caraNam 2

pancarivaru yAvAgalU honchAgi ennanu nODudAre
koncagAraru Aru mandi avaru hincu mincillade eLeyutAre

caraNam 3

munna mADida duSkarmadi baLalide innAdaru nInenna kAyo
ghanna mahima shrI purandara viTTala mannisi mamate ennali tOro
***