ಎನ್ನ ಬಿಟ್ಟು ನೀನಗಲದೆ ಶ್ರೀನಿವಾಸ ||ಪ||
ನಿನ್ನ ನಂಬಿದ ದಾಸನಲ್ಲವೇನೋ ||ಅ||
ತನುವೆಂಬೊ ಮಂಟಪದಿ ಮನವೆಂಬೊ ಹಸೆ ಮಂಚ , ಘನವಾದ ಸುಜ್ಞಾನ
ದೀಪದ ಬೆಳಕಲ್ಲಿ, ಸನಕಾದಿ ವಂದ್ಯ ನೀ ಬೇಗ ಬಾರೋ ||
ಪಂಚರಿವರು ಯಾವಾಗಲೂ, ಹೊಂಚ್ಹಾಕಿ ಎನ್ನನು ನೋಡುತಾರೆ
ಕೊಂಚಗಾರರು ಆರು ಮಂದಿ ಅವರು, ಹಿಂಚು ಮಿಂಚಿಲ್ಲದೆ ಎಳೆಯುತಾರೆ ||
ಮುನ್ನ ಮಾಡಿದ ದುಷ್ಕರ್ಮದಿ ಬಳಲಿದೆ, ಇನ್ನಾದರು ನೀನೆನ್ನ ಕಾಯೊ
ಘನ್ನ ಮಹಿಮ ಶ್ರೀ ಪುರಂದರವಿಠಲ, ಮನ್ನಿಸಿ ಮಮತೆ ಎನ್ನಲಿ ತೋರೊ ||
***
ರಾಗ ಮಂಚಿ. ಛಾಪು ತಾಳ
pallavi
enna biTTu nInagalade shrInivAsa
anupallavi
inna nambida dAsanallavEnO
caraNam 1
tanuvembo maNTapadi manavembo hase manca
ghanavAda sujnAna dIpada beLagalli sanakAdi vandya nI bEga bArO
caraNam 2
pancarivaru yAvAgalU honchAgi ennanu nODudAre
koncagAraru Aru mandi avaru hincu mincillade eLeyutAre
caraNam 3
munna mADida duSkarmadi baLalide innAdaru nInenna kAyo
ghanna mahima shrI purandara viTTala mannisi mamate ennali tOro
***
No comments:
Post a Comment