Showing posts with label ಬಾರಯ್ಯ ಬಾಬಾ ಭಕುತರಪ್ರಿಯಾ ಶ್ರೀನಿವಾಸರಾಯ gopala vittala BAARAYYA BABA BHAKUTARA PRIYA SRINIVASARAYA. Show all posts
Showing posts with label ಬಾರಯ್ಯ ಬಾಬಾ ಭಕುತರಪ್ರಿಯಾ ಶ್ರೀನಿವಾಸರಾಯ gopala vittala BAARAYYA BABA BHAKUTARA PRIYA SRINIVASARAYA. Show all posts

Thursday 12 December 2019

ಬಾರಯ್ಯ ಬಾಬಾ ಭಕುತರಪ್ರಿಯಾ ಶ್ರೀನಿವಾಸರಾಯ ankita gopala vittala BAARAYYA BABA BHAKUTARA PRIYA SRINIVASARAYA



 ರಾಗ ಹಂಸಧ್ವನಿ      ಆದಿತಾಳ 

2nd Audio by Mrs. Nandini Sripad

ಶ್ರೀ ಗೋಪಾಲದಾಸರ ಕೃತಿ 


ಬಾರೈಯ್ಯಾ ಬಾಬಾ ಭಕುತರ ಪ್ರಿಯ್ಯಾ । ಶ್ರೀನಿವಾಸರಾಯ ।
ಮಾರಾಜನಕ ಮುಕ್ತರೊಡಿಯ । ದೇವಾ ಸಾಹಜೀಯಾ ॥
ವಾರಿಜಲಯಪತೆ ವಾರಿಜನಾಭನೆ ।
ವಾರಿಜಭವಪಿತ ವಾರಿಜನೇತ್ರನೆ ।
ವಾರಿಜಮಿತ್ರ ಅಪಾರ ಪ್ರಭಾವಾಯೇ ।
ವಾರಿಜಜಾಂಡದ ಕಾರಣ ದೊರಿಯೆ ॥ ಪ ॥

ಪರ ಪಾರಮೇಷ್ಠಿ ನಾರಾಯಣ । ಸರ್ವದ ಪರಿಪೂರ್ಣ ।
ಪರತಂತ್ರದೂರ ಶುಭಗುಣಾರ್ಣ । ಪರಂಜ್ಯೋತಿ ।
ಪರತತ್ವ ಪರಮ ಕಲ್ಯಾಣ ॥
ಪರತರ ಪರತಮ ಪರಮ ಪುರುಷಯೇ ।
ಪರಮಪಾವನ ಬಾ ಪರಮಾನಂದಾನೆ ।
ಶಿರಿಧರ ಮುರಹರ ಪರಿಪರಿಚರಿತಾನೆ ।
ನರಸಾರಥಿ ಹರಿ ಉರಗಾರಿ ಗಮನಾ ॥ 1 ॥

ಸ್ಯಂದಾನಾವೇರಿ ಬಪ್ಪಾ ರಂಗಾ । ದೇವೋತ್ತುಂಗ ।
ನಂದಾನಂದಾನಾ ಅರಿಮದಭಂಗ । ಕಾರುಣ್ಯಾಪಾಂಗಾ ।
ಸುಂದರ ವಿಗ್ರಹ ಶುಭಾಂಗ ॥
ಕಂದ ವಿರಂಚಿಯು ನಂದಿವಾಹನ ಅಮ - ।
ರೇಂದ್ರ ಸನಕ ಸನಂದನಾದಿ ಸುರ ।
ವೃಂದ ಬಂದು ಧಿಂ ಧಿಂ ಧಿಮಿ ಧಿಮಿಕೆಂದು ।
ನಿಂದಾಡಲು ಆನಂದದಿ ಮನಕೆ ॥ 2 ॥

ಜಗಜನ್ಮಾದಿ ಕರ್ತ ಗೋವಿಂದ । ಉದರದಿ ಲೋಕ ।
ಲಘುವಾಗಿ ಧರಿಸಿದ ಮುಕುಂದಾ । ಭಕ್ತರಾ ಮನದಿ । 
ಝಗ ಝಗಿಸುತ ಪೊಳೆವಾ ಆನಂದಾ ॥
ನಿಗಮಾವಳಿಯಿಂದಗಣಿತ ಮುನಿಗಣ ।
ನಗ ಖಗಮೃಗ ಶಶಿ ಗಗನ ಮಣ್ಯಾದ್ಯರೂ ।
ಸೊಗಸಾಗಿ ಬಗೆ ಬಗೆ ಚಿಗಿಚಿಗಿದಾಡಲೂ ।
ಮುಗುಳು ನಗೆಯಾ ಮೊಗ ನಗಗಿರಿವಾಸಾ ॥ 3 ॥

ಕ್ಷಿತಿಯನಳದಾ ಘನರೂಪಾ ಮಂದಾರ ಪ।ರ್ವತವ ಧರಿಸಿದ ।
ಪ್ರತಾಪ ಸರ್ವದ ಪಂಚ । ಶತಕೋಟಿ ।
ಜನದಾಧಾರಾ ರೂಪ ॥
ದಿತಿಸುತ ಖತಿ ತತಿ ಅತಿರಾವಿಂದಕೆ ।
ಶತಪತ್ರನಹಿತಮಿತನಂ ತೋರಿಸಿ ।
ಕ್ರತುಭುಜರಿಗೆ ಅಮೃತ ಉಣನೀಡಿದೆ ।
ಜಿತರಹಿತಜಿತ ವೃತ ಕ್ರತುಪಾಲಾ ॥ 4 ॥

ತಡಮಾಡಬ್ಯಾಡಯ್ಯಾ ಯೇ ನಲ್ಲ । ವಾಕು ಲಾಲಿಸು ಎ - ।
ನ್ನೊಡಿಯ ಶ್ರೀಗೋಪಾಲವಿಠ್ಠಲ । ದೇವಾ ಪರಾಕು ।
ಅಡಿಯಿಡೋ ಭಕುತರ ವತ್ಸಲ ॥
ಕಡಲೊಳು ಗಜ ಮೊರೆಯಿಡಲಾಕ್ಷಣ ಕೇಳಿ ।
ಮಡದಿಗೆ ಹೇಳದೆ ಧುಡಧುಡನೆ ಬಂ - ।
ಧಿಡಿದು ನಕ್ರನ ಬಾಯ ಕಡಿದು ಬಿಡಿಸಿದಾನೆ ।
ಸಡಗರದಲಿ ರಮೆ ಪೊಡವಿಯೊಡನೆ ವೇಗಾ ॥ 5 ॥
***

Varijalayapate varijanabane
varijabavapita varijanetrane
varijamitra aparaprabavane
varija jandada karana doreye

baraiyya ba ba Bakutara priya srinivasa raya ||pa||

Mara janaka mukutarodeya devaiyya jiya ||apa||

Syamdanaveribappa ranga devottunga
nanda nandana arimadabanga karunapanga
sindhusayana sundaranga he narasinga
kanda virinchiyu nandivahana amarendra
sanaka sanandanadi muni
vrunda bandu nindu dhim dhim dhimikendu
nindadalu Anandadi manake ||1||

Jagat janmadi karta govinda
udaradi loka laguvagi dharisida mukunda
Bakutara manake Jaga Jagisuta polevananda nigamavaliyinda
aganita munigana naga Kaga mruga sasi
gagana manyadyaru sogasagi bage bage
pogalutali bega jigijigidadalu
mugulunageya maha uragagirivasa ||2||

Tadamada byadavo he nalla
vaku lalisu ennodeya gopala viththala
deva paraku adi idu Baktavatsala sri lakuminalla
maduvinolage gaja moreyidalakshana
madadige helade dudadudane bandu
hididu nakrana baya kadidu bidisidane
sadagaradali ramepodaviyodagudi bega ||3||
***

pallavi

vArijalayapati vArijanAbhane vArijabhavapita vArijanEtrane vArijamitra apAraprabhAvane vArija jhAnDada kAraNa doreye

anupallavi

bAraiyya bA bA bakutara priya srinivAsa rAya mAra janaka mukutarODeya devaiyya jIya srinivAsa rAya

caraNam 1

syandanavEribappa raMga devOtuMga naMda naMdana arimada bhaMga karUNA pAnga
siMdhu shayana suMdarAMga he nArasimha kanda viriMchiyu naMdivAhana amareMdra
sanakana sanaMdanAdi muni vriMda baMdu niMdu dim dim dimikeMdu niMdADalu Anadadi manake

caraNam 2

jagat janmmAdi karta goviMda udaradi lOkava laguvAgi darisida mukuMda bhaktara manake
jaga jagisuva polevAnaMda nigamAvaliyiMda aganita munigaNa naga kaga mriga shashi gagana
maNyAdyaru sogasAgi bhage bhage pogalutali bega chigichigidADalu mugulunageyu mahO uragagirivAsa

caraNam 3

taDamADa byADavo he nalla vAku lAlisuennoDeya gOpAla viThThala deva parAku
aDi iDu bhaktavatsala shrI lakuminalla maDuvinolage gaja moreyiDalAkshane maDadige hellade
duDuduDune baMdu hiDidu nakrana bAya kaDidu biDisidane saDagaradali ramepoDaviloDane bega
***


ವಾರಿಜಲಯಪತೆ ವಾರಿಜನಾಭನೆ
ವಾರಿಜಭವಪಿತ ವಾರಿಜನೇತ್ರನೆ
ವಾರಿಜಮಿತ್ರ ಅಪಾರಪ್ರಭಾವನೆ
ವಾರಿಜ ಝಾಂಡದ ಕಾರಣ ದೊರೆಯೆ
ಬಾರೈಯ್ಯ ಬಾ ಬಾ ಭಕುತರ ಪ್ರಿಯ ಶ್ರೀನಿವಾಸ ರಾಯ ||ಪ||
ಮಾರ ಜನಕ ಮುಕುತರೊಡೆಯ ದೇವೈಯ್ಯ ಜೀಯ ||ಅಪ||

ಸ್ಯಂದನವೇರಿಬಾಪ್ಪ ರಂಗ ದೇವೋತ್ತುಂಗ
ನಂದ ನಂದನ ಅರಿಮದಭಂಗ ಕರುಣಾಪಾಂಗ
ಸಿಂಧುಶಯನ ಸುಂದರಾಂಗ ಹೇ ನಾರಸಿಂಗ
ಕಂದ ವಿರಿಂಚಿಯು ನಂದಿವಾಹನ ಅಮರೇಂದ್ರ
ಸನಕ ಸನಂದನಾದಿ ಮುನಿ
ವೃಂದ ಬಂದು ನಿಂದು ಧಿಂ ಧಿಂ ಧಿಮಿಕೆಂದು
ನಿಂದಾಡಲು ಆನಂದದಿ ಮನಕೆ ||೧||

ಜಗತ್ ಜನ್ಮಾದಿ ಕರ್ತ ಗೋವಿಂದ
ಉದರದಿ ಲೋಕ ಲಘುವಾಗಿ ಧರಿಸಿದ ಮುಕುಂದ
ಭಕುತರ ಮನಕೆ ಝಗ ಝಗಿಸುತ ಪೊಳೆವಾನಂದ ನಿಗಮಾವಳಿಯಿಂದ
ಅಗಣಿತ ಮುನಿಗಣ ನಗ ಖಗ ಮೃಗ ಶಶಿ
ಗಗನ ಮಣ್ಯಾದ್ಯರು ಸೊಗಸಾಗಿ ಬಗೆ ಬಗೆ
ಪೊಗಳುತಲಿ ಬೇಗ ಜಿಗಿಜಿಗಿದಾಡಲು
ಮುಗುಳುನಗೆಯ ಮಹಾ ಉರಗಗಿರಿವಾಸ ||೨||

ತಡಮಾಡ ಬ್ಯಾಡವೊ ಹೇ ನಲ್ಲ
ವಾಕು ಲಾಲಿಸು ಎನ್ನೊಡೆಯ ಗೋಪಾಲ ವಿಠ್ಠಲ
ದೇವ ಪರಾಕು ಅಡಿ ಇಡು ಭಕ್ತವತ್ಸಲ ಶ್ರೀ ಲಕುಮಿನಲ್ಲ
ಮಡುವಿನೊಳಗೆ ಗಜ ಮೊರೆಯಿಡಲಾಕ್ಷಣ
ಮಡದಿಗೆ ಹೇಳದೆ ದುಡದುಡನೆ ಬಂದು
ಹಿಡಿದು ನಕ್ರನ ಬಾಯ ಕಡಿದು ಬಿಡಿಸಿದನೆ
ಸಡಗರದಲಿ ರಮೆಪೊಡವಿಯೊಡಗೂಡಿ ಬೇಗ ||೩||
***




ಶ್ರೀ ಗೋಪಾಲದಾಸರ ಕೃತಿ 

 ರಾಗ ಹಂಸಧ್ವನಿ             ಆದಿತಾಳ 

ಬಾರಯ್ಯಾ ಬಾಬಾ ಭಕುತರಪ್ರಿಯಾ । ಶ್ರೀನಿವಾಸರಾಯ ।
ಮಾರಜನಕ ಮುಕುತರೊಡೆಯ । ದೇವಯ್ಯ ಜೀಯ ॥ಪ॥
ವಾರಿಜಲಯಪತೆ ವಾರಿಜನಾಭನೆ 
ವಾರಿಜಭವಪಿತ ವಾರಿಜನೇತ್ರನೆ
ವಾರಿಜಮಿತ್ರ ಅಪಾರ ಪ್ರಭಾವನೆ
ವಾರಿಜಜಾಂಡದ ಕಾರಣ ದೊರೆಯೆ ॥ ಅ ಪ ॥

ಸ್ಯಂದನವೇರಿ ಬಪ್ಪ ರಂಗ। ದೇವೋತ್ತುಂಗ ।
ನಂದನಂದನ ಅರಿಮದಭಂಗ । ಕಾರುಣ್ಯಾಪಾಂಗ ।
ಸಿಂಧುಶಯನ ಸುಂದರಾಂಗ । ಹೇ ನಾರಸಿಂಗ ॥
ಕಂದ ವಿರಿಂಚಿಯು ನಂದಿವಾಹನ ಅಮ -
ರೇಂದ್ರ ಸನಕಸನಂದನಾದಿ ಮುನಿ 
ವೃಂದ ಬಂದು ನಿಂತು ಧಿಮಿ ಧಿಮಿ ಧಿಮಿಕೆಂದು 
ನಿಂದಾಡಲು ಆನಂದದಿ ಮನಕೆ ॥ 1 ॥

ಜಗಜನ್ಮಾದಿಕರ್ತ ಗೋವಿಂದ । ಉದರದಿ ಲೋಕ ।
ಲಘುವಾಗಿ ಧರಿಸಿದ ಮುಕುಂದ । ಭಕ್ತರ ಮನಕೆ । ಝಗಝಗಿಸುತ ಪೊಳೆವಾನಂದ । ನಿಗಮಾವಳಿಯಿಂದ ॥
ಅಗಣಿತ ಮುನಿಗಣ ನಗಖಗಮೃಗ ಶಶಿ 
ಗಗನಮಣ್ಯಾದ್ಯರು ಸೊಗಸಾಗಿ ಬಗೆಬಗೆ 
ಪೊಗಳುತಲಿ ವೇದ ಜಿಗಿಜಿಗಿದಾಡಲು 
ಮುಗುಳುನಗೆಯ ಮಹೋರಗ ಗಿರಿವಾಸ ॥ 2 ॥

ತಡಮಾಡ ಬ್ಯಾಡವೊ ಹೇ ನಲ್ಲ । ವಾಕುಲಾಲಿಸು ।ಎ -
ನ್ನೊಡೆಯ ಶ್ರೀಗೋಪಾಲವಿಠ್ಠಲ್ಲ । ದೇವ ಪರಾಕು ।
ಅಡಿಗಳನಿಡು ಭಕ್ತವತ್ಸಲ್ಲ । ಶ್ರೀ ಲಕುಮಿ ನಲ್ಲ ॥
ಮಡುವಿನೊಳಗೆ ಗಜ ಮೊರೆಯಿಡಲಾಕ್ಷಣ 
ಮಡದಿಗೆ ಹೇಳದೆ ದಡದಡನೆ ಬಂದು 
ಹಿಡಿದು ನಕ್ರನ ಬಾಯ್ಕಡಿದು ಬಿಡಿಸಿದನೆ
ಸಡಗರದಲಿ ರಮೆ ಪೊಡವಿಯೊಡನೆ ಕೂಡಿ ॥ 3 ॥
*********