Showing posts with label ಮರುದಂಘ್ರಿಕಿಸಲಯ ಧ್ಯಾನ ನಾ ನಿರತದಿ ಮಾಡಿ purandara vittala. Show all posts
Showing posts with label ಮರುದಂಘ್ರಿಕಿಸಲಯ ಧ್ಯಾನ ನಾ ನಿರತದಿ ಮಾಡಿ purandara vittala. Show all posts

Thursday, 5 December 2019

ಮರುದಂಘ್ರಿಕಿಸಲಯ ಧ್ಯಾನ ನಾ ನಿರತದಿ ಮಾಡಿ purandara vittala

ರಾಗ ಗಳಿಪಂತುವರಾಳಿ ಟ್ರಿಪುಟ ತಾಳ 

ಮರುದಂಘ್ರಿಕಿಸಲಯ ಧ್ಯಾನ, ನಾ
ನಿರತದಿ ಮಾಡಿ ಅರ್ಚಿಸುವೆ ಸುಜ್ಞಾನ ||ಪ ||

ಹರಪುರಂದರಸ್ಮರಮುಖ್ಯಾಮರ ನಿ-
ಕರಯಿಚ್ಛಿತ ದಾಸ ಪಟುತರ
ಭರದಿ ಭಜಿಸುವ ಸುಜನವರಕರ
ಧರಣಿಯೊಳಗವತರಿಸಿ ಮೆರೆದನೆ ||ಅ ||

ರಘುಪತಿ ಚರಣದಿ ವಿನಯ, ಬಹು
ಲಘುವಿಕ್ರಮದಿ ಕಡಲಕೊನೆಯ ಸೇರಿ
ಮಘವದ್ವೈರಿ ಪಿತನರಮನೆಯ, ಪೊಕ್ಕು
ಜಗನಾರೂಪದಿ ಬಹು ಸುನಯ |
ಬಗೆಬಗೆ ನಗರವೆಲ್ಲ ತಿರುಗುತ
ಆಗಳಕೆಗಳ ಜಾನಕಿಯ ಮುದ್ದು
ಚಿಗುರುಚರಣಕ್ಕೆರಗಿ ರಭಸದಿ
ಜಿಗಿದು ಆ ಕ್ಷಣ ಕೆಡಹಿ ಮೆರೆದನೆ ||

ಕುಂತೀ ಕುಮಾರನೆಂದೆನಿಸಿ, ಧರ್ಮ-
ಕಂತ್ಯದಾಯಿಗಳ ಸಂಹರಿಸಿ ದಿ-
ಗಂತರ ಕೀರ್ತಿಯ ಮೆರೆಸಿ, ತನ್ನ
ಅಂತರಂಗದಿ ಹರಿಯ ಭಜಿಸಿ
ಶಾಂತನವ ಮುಖ ಸ್ತೈವ್ಯ ಮೃಗಗಳ
ದಂತಿರಿಪುನಾದದಲಿ ಹೆದರಿಸಿ
ಪಂಥಶಪಥಕೆ ದುರುಳಯೋಧನ-
ನಂತಕನ ಮಂದಿರಕೆ ಸಲಿಸಿದ ||

ವರಯತಿರೂಪವ ಧರಿಸಿ ,ಬಹು
ದುರುಳ ಮತಗಳ ನಿರಾಕರಿಸಿ
ಉರುತರ ಭಾಷ್ಯಗಳ ರಚಿಸಿ, ತನ್ನ
ಶರಣೆಂಬರನು ಆದರಿಸಿ
ದರ ಸುದರ್ಶನ ಅಂಕಿತವ ನಿಜ
ಸುರಸುರಾನುಗರಿಗೆ ರಂಜಿಸಿ
ದೊರೆ ಪುರಂದರವಿಠಲನಾ ಬಲ-
ಕರದಲಿ ಗುರು ಧರಿಸಿ ತೋರಿದ ||
***

pallavi

marudanghrikisalaya dhyAna nA niratadi mADi arcisuve su-jnAna

anupallavi

hara purandara smara mukhyAmara nikarayicchita dAsa paTutara bharadi bhajisuva sujanavarakara dharaNiyoLagavatarisi meredane

caraNam 1

raghupati caraNadi vinaya bahu laghu vikramadi kaDalakoneya sEri
maghavadvairi pitanara maneya pokku jaganArUpadi bahu sunaya
bagebage nagaravella tiruguta AgaLakegaLa jAnakiya muddu
ciguru caraNakkeragi rabhasadi cigidu A kSaNa keDahimeredane

caraNam 2

kuntI kumAranendenisi dharma kantyadAyigaLa samharisi
digantara kIrtiya meresi tanna antarangadi hariya bhajisi
shAntanava mukha staivya mrgagaLa dantiripunAdadali hedarisi
bantha shapadake duruLayOdhana nandakana mantirake salisida

caraNam 3

vara yati rUpava bahu duruLa matagaL nirAkarisi
urutara bhASyagaLa racisi tanna sharaNembaranu Adarisi
dara sudarshana ankitava nija surAsuranugaringe ranjisi
dore purandara viTTalanA bala karadali guru dharisi tOrida
***