Audio by Mrs. Nandini Sripad
ರಾಗ : ಕಾಂಬೋದಿ ತಾಳ : ಝಂಪೆ
ಯಾತರವ ನಾನಯ್ಯ ಇಂದಿರೇಶ
ಹೋತಾಹ್ವಯನೆ ನಿನ್ನಧೀನವೀ ಜಗವೆಲ್ಲ ।।ಪ॥
ಕಾಲಗುಣಕರ್ಮಸ್ವಭಾವಗಳ ಮನೆಮಾಡಿ ಶ್ರೀ
ಲೋಲ ನೀ ಸರ್ವರೊಳಗೆ ಇದ್ದು
ಲೀಲೆಗೈಯುತ ಲಿಪ್ತನಾಗದೆ ನಿರಂತರದಿ
ಪಾಲಿಸುವೆ ಸಂಹರಿಪೆ ದಿವಿಜದಾನವತತಿಯ ।।೧।।
ತಿಳಿಸಿಕೊಂಬುವ ನೀನೆ ಶ್ರುತಿಸ್ಮೃತಿಗಳೊಳಗಿದ್ದು
ತಿಳಿಸುವವ ನೀನೆ ಉಪದೇಶಕರೊಳು
ತಿಳಿವವನು ನೀನೆ ಬುದ್ಧ್ಯಾದಿಂದ್ರಿಯಗಳೊಳು
ನೆಲೆಗೊಂಡು ನಿಖಿಳ ವ್ಯಾಪಾರಗಳ ಮಾಡುತಲಿಪ್ಪೆ ।।೨।।
ಜಗದಿ ಜನ್ಮಾದಿಗಳಿಗೆಂತು ಕಾರಣನೆಂದು
ನಿಗಮತತಿಗಳು ನಿತ್ಯಸ್ತುತಿಸುತಿಹವು
ತ್ರಿಗುಣವರ್ಜಿತ ಜಗನ್ನಾಥವಿಠಲನು ನೀನು
ಅಗಣಿತ ಕುಯೋನಿಮುಖದಲಿ ಬಂದವನು ನಾನು ।।೩।।
***
Yatarava nanayya indiresa
Hotahvayane ninnadhinavi jagavella ||pa||
Kalagunakarmasvabavagala manemadi sri
Lola ni sarvarolage iddu
Lilegaiyuta liptanagade nirantaradi
Palisuve samharipe divijadanavatatiya ||1||
Tilisikombuva nine srutismrutigalolagiddu
Tilisuvava nine upadesakarolu
Tilivavanu nine buddhyadindriyagalolu
Nelegondu nikila vyaparagala madutalippe ||2||
Jagadi janmadigaligemtu karananendu
Nigamatatigalu nityastutisutihavu
Trigunavarjita jagannathavithalanu ninu
Aganita kuyonimukadali bandavanu nanu ||3||
***